ಸಿಎಂ ಸೀಟಿನ ಮೇಲೆ ಶಿವಸೇನೆ ಕಣ್ಣು..! ಬಿಜೆಪಿ ಕಥೆಯೇನು..?

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಈ ನಡುವೆ ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆ ವಿಚಾರ ಅಂತಿಮವಾಗಿದೆ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಸೀಟು ಹಂಚಿಕೆ ಬಗ್ಗೆ ಅಮಿತ್ ಶಾ ಅವರೊಂದಿಗೆ ಅಂತಿಮ ಹಂತದ ಮಾತುಕತೆ ಮುಗಿದಿದ್ದು, ಇವತ್ತೇ ಘೋಷಿಸಲಾಗುತ್ತೆ ಅಂತ ಹೇಳಿದ್ದಾರೆ. ಇದೇ ವೇಳೆ ನಾನು ಈ ಹಿಂದೆ ತಂದೆ ಬಾಲಾಸಾಹೇಬ್ ಅವರಿಗೆ ಒಂದು ದಿನ ನಮ್ಮದೇ ಪಕ್ಷದವರು ಸಿಎಂ ಆಗುತ್ತಾರೆ ಎಂದು ಮಾತುಕೊಟ್ಟಿದ್ದೆ. ಸಿಎಂ ದೇವೇಂದ್ರ ಫಡ್ನಾವಿಸ್ ಜೊತೆ ಸೀಟು ಹಂಚಿಕೆ ವಿಚಾರ ಮಾತನಾಡುವಾಗ ಪಿತೃಪಕ್ಷದ ವಿಚಾರ ಬಂತು. ಆಗ ನನಗೆ ಪಕ್ಷವೇ ಪಿತೃ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ಪಕ್ಷವಿದ್ದಂತೆ ಎಂದು ನಾನು ಹೇಳಿದೆ ಅಂದ್ರು.

Contact Us for Advertisement

Leave a Reply