ಅನ್ನದಾತನಿಗೆ ಅವಮಾನ ಮಾಡಿದ ಮಿನಿಸ್ಟರ್‌ ಶಿವಾನಂದ್‌ ಪಾಟೀಲ್!

masthmagaa.com:

ಸಕ್ಕರೆ ಸಚಿವ ಶಿವಾನಂದ್‌ ಪಾಟೀಲ್‌ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ʻಸರ್ಕಾರಗಳು ಪುಕ್ಕಟ್ಟೆ ನೀರು, ಕರೆಂಟ್‌ ಕೊಡುತ್ತವೆ. ಕೆಲವು ಸರ್ಕಾರಗಳು ಬಿತ್ತನೆ ಬೀಜ, ಗೊಬ್ಬರವನ್ನೂ ಕೊಟ್ಟಿವೆ. ಆದರೆ, ರೈತರು ಸಾಲ ಮನ್ನ ಮಾಡ್ಬೇಕು ಅಂತ ನಿರೀಕ್ಷೆ ಮಾಡ್ತಾರೆ. ಬರಗಾಲ ಬರಲಿ ಅಂತ ರೈತರಿಗೆ ಆಸೆ. ಹಿಂದಿನ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿವೆ. ಆದ್ರೆ ಸರ್ಕಾರವೇ ಸಂಕಷ್ಟದಲ್ಲಿದ್ದಾಗ ಸಾಲ ಮನ್ನಾ ಸಾಧ್ಯವಿಲ್ಲʼ ಅಂತ ಶಿವಾನಂದ್‌ ಪಾಟೀಲ್‌ ಹೇಳಿದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ರಾಜ್ಯ ಬಿಜೆಪಿ ʻರೈತ ವಿರೋಧಿ ಸರ್ಕಾರ ಅನ್ನದಾತನನ್ನ ಅಪಹಾಸ್ಯ, ಅವಮಾನ ಮಾಡ್ತಾ, ಅವ್ರನ್ನ ಕುಗ್ಗಿಸೋ ಕೆಲಸ ಮಾಡ್ತಿದೆ. ಬರ ಬರಲಿ ಅಂತ ರೈತರು ಕಾಯ್ತಾ ಕೂತಿಲ್ಲ. ಆದ್ರೆ ಕಾಂಗ್ರೆಸ್‌ನ ಕಾಲ್ಗುಣದಿಂದ ಬರಗಾಲ ಬಂದಿದೆ ಅಂತ ಗೇಲಿ ಮಾಡಿದೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ʻರೈತರು ಕೇಳ್ತಿರೋದು ತಮ್ಮ ಹಕ್ಕುಗಳನ್ನೇ ಹೊರತು, ಭಿಕ್ಷೆಯನ್ನಲ್ಲ. ಈ ಹೇಳಿಕೆ ಖಂಡನೀಯ. ಅವ್ರು ಕೂಡಲೇ ರೈತರ ಬಳಿ ಕ್ಷಮೆ ಕೇಳ್ಬೇಕು ಅಂದಿದ್ದಾರೆ. ಇನ್ನು ಸಚಿವರ ಈ ವಿವಾದಾತ್ಮಕ ಹೇಳಿಕೆಗೆ ರಾಜ್ಯದೆಲ್ಲೆಡೆ ರೈತ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿ ತಮ್ಮ ಆಕ್ರೋಶ ಹೊರಹಾಕ್ತೀವೆ. ಇದರಿಂದ ಎಚ್ಚೆತ್ತುಕೊಂಡ ಸಚಿವರು ʻನಾನು ರೈತರ ವಿರುದ್ಧ ಮಾತನಾಡಿಲ್ಲ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಕೇಂದ್ರ ಸರ್ಕಾರವೇ ರೈತ ವಿರೋಧಿʼ ಅಂತೇಳಿ ಉಲ್ಟಾ ಹೊಡೆದಿದ್ದಾರೆ. ಅಂದ್ಹಾಗೆ ಈ ಹಿಂದೆ ಕೂಡ ಶಿವಾನಂದ ಪಾಟೀಲ್, ʻರೈತರು ಕುಡಿದು ಸತ್ತರೂ, ಹೃದಯಾಘಾತದಿಂದ ಸತ್ತರೂ ಆತ್ಮಹತ್ಯೆ ಅಂತ ಅವರ ಸಂಬಂಧಿಕರು ದೂರು ಕೊಡ್ತಾರೆ. ಪರಿಹಾರ ಸಿಗುತ್ತೆ ಅಂತ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ” ಅಂತೇಳಿ ವಿವಾದ ಸೃಷ್ಟಿಸಿದ್ರು.

-masthmagaa.com

Contact Us for Advertisement

Leave a Reply