RCB vs CSK ಪಂದ್ಯ ವೀಕ್ಷಿಸಿದ ಶಿವಣ್ಣ ಮತ್ತು ಧನುಷ್‌

masthmagaa.com:

ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ರೋಚಕ ಮ್ಯಾಚ್‌ ನಡೆಯಿತು. ವಿಶೇಷ ಅಂದರೆ ಈ ಮ್ಯಾಚ್‌ ನೋಡೊಕೆ ಶಿವಣ್ಣ ಹಾಗೂ ಧನುಷ್‌ ಕೂಡ ಬಂದಿದ್ದರು. ಶಿವಣ್ಣ ಆರ್‌ಸಿಬಿ ಜರ್ಸಿ ಹಾಕೊಂಡು ಆರ್‌ಸಿಬಿ ತಂಡಕ್ಕೆ ಸಪೋರ್ಟ್‌ ಮಾಡಿದ್ರೆ, ಧನುಷ್‌ ಚೆನ್ನೈ ತಂಡಕ್ಕೆ ಸಪೋರ್ಟ್‌ ಮಾಡಿದ್ರು. ಇವರಿಬ್ಬರ ಫೋಟೊಗಳು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಾ ಇದೆ. ಶಿವಣ್ಣ ಅವರ ಎನರ್ಜಿಗೆ ಅಭಿಮಾನಿಗಳು ಫಿದಾ ಆಗ್ಬಿಟ್ಟಿದ್ದಾರೆ. ಆರ್​ಸಿಬಿ ಆಟಗಾರರು ಸಿಕ್ಸ್ ಹೊಡೆದಾಗೆಲ್ಲ ಶಿವಣ್ಣ ಶಿಳ್ಳೆ ಹಾಕಿ, ಚಪ್ಪಾಳೆ ಹೊಡೆದು ಎಂಜಾಯ್‌ ಮಾಡ್ತಿದ್ದರು. ಈ ಇಂಟ್ರಸ್ಟಿಂಗ್‌ ಮ್ಯಾಚ್‌ನಲ್ಲಿ ಆರ್​ಸಿಬಿ ಹೋರಾಡಿ ಸೋಲೊಪ್ಪಿಕೊಂಡಿತು.

ಇನ್ನು ಧನುಷ್ ಹಾಗೂ ಶಿವರಾಜ್​ಕುಮಾರ್ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಸತತವಾಗಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಧನುಷ್ ಮತ್ತು ಶಿವರಾಜ್ ಕುಮಾರ್ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ.

-masthmagaa.com

Contact Us for Advertisement

Leave a Reply