ಧನುಷ್‌ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾದ “ಶಿವಣ್ಣ”

masthmagaa.com:

2023 ಶಿವರಾಜ್‌ಕುಮಾರ್‌ ಅವರಿಗೆ ವಿಶೇಷವಾದ ವರ್ಷ ಅಂತಾನೆ ಹೇಳಬಹುದು. ಶಿವರಾಜ್‌ಕುಮಾರ್‌ ಕನ್ನಡ ಮಾತ್ರವಲ್ಲದೇ ಸದ್ಯ ತಮಿಳಿನಲ್ಲೂ ಬ್ಯೂಸಿ ಆಗಲಿದ್ದಾರೆ. ತಮಿಳಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ ಮತ್ತು ಧನುಷ್‌ ಅಭಿನಯದ ಚಿತ್ರದಲ್ಲಿ ಶಿವಣ್ಣ ಕೂಡ ಕಾಣಿಸಲಿದ್ದಾರೆ. ಇತ್ತೀಚೆಗೆ ರಜನಿಕಾಂತ್‌ ಅಭಿನಯದ ‘ಜೈಲರ್’ ಚಿತ್ರದ ದೃಶ್ಯಗಳನ್ನ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು.ಅದರಲ್ಲೂ ಕೂಡ ಶಿವಣ್ಣ ಪಾಲ್ಗೊಂಡಿದ್ದರು. ಮಫ್ತಿ ಸಿನಿಮಾದ ಭೈರತಿ ರಣಗಲ್‌ ಪಾತ್ರ ಶಿವರಾಜ್‌ ಕುಮಾರ್‌ ಅವರಿಗೆ ಒಳ್ಳೆಯ ಹೆಸರನ್ನ ತಂದು ಕೊಟ್ಟಿತ್ತು, ಸದ್ಯ “ಜೈಲರ್‌” ಸಿನಿಮಾದಲ್ಲೂ ಅದೇ ತರಹದ ಪಾತ್ರವನ್ನ ಮಾಡಲಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ʼಜೈಲರ್‌ʼ ಸಿನಿಮಾದ ನಂತರ ಅರುಣ್‌ ಮಾಥೇಶ್ವರನ್‌ ನಿರ್ದೇಶನದ “ಕ್ಯಾಪ್ಟನ್‌ ಮಿಲ್ಲರ್‌” ಚಿತ್ರದಲ್ಲಿ ನಾಯಕನಿಗೆ ಅಣ್ಣನ ಪಾತ್ರದಲ್ಲಿ ಕಾಣಿಸಲಿದ್ದಾರೆ. “ಕ್ಯಾಪ್ಟನ್‌ ಮಿಲ್ಲರ್‌” ಚಿತ್ರದಲ್ಲಿ ಧನುಷ್‌ ಅವರು ನಾಯಕನಾಗಿ ನಟಿಸಲಿದ್ದಾರೆ. ಈ ವಿಷಯವನ್ನ ಶಿವರಾಜ್‌ಕುಮಾರ್‌ ಅವರೇ ಬಹಿರಂಗ ಪಡಿಸಿದ್ದಾರೆ. ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಚಿತ್ರೀಕರಣ ಕುರ್ಟಾಲಂನಲ್ಲಿ ಪ್ರಾರಂಭವಾಗಿದ್ದು, ಇದು 10 ದಿನಗಳ ಶೆಡ್ಯೂಲ್ ಆಗಿದ್ದು, ಇದರಲ್ಲಿ ಶಿವರಾಜಕುಮಾರ್ ಭಾಗವಹಿಸುತ್ತಿದ್ದಾರೆ. ಚಿತ್ರೀಕರಣವು ಬಹಳ ಹಿಂದೆಯೇ ಪ್ರಾರಂಭವಾಗಬೇಕಿತ್ತು ಆದರೆ ಕೇರಳದಲ್ಲಿನ ಕೆಟ್ಟ ಹವಾಮಾನದಿಂದಾಗಿ ಚಿತ್ರೀಕರಣವನ್ನು ಇದೀಗ ಕುರ್ಟಾಲಂಗೆ ಸ್ಥಳಾಂತರಿಸಲಾಗಿದೆ. ಅರುಣ್ ಮಾಥೇಶ್ವರನ್ ಅವರ ‘ರಾಕಿ’ ಸಿನಿಮಾದಿಂದ ಧನುಷ್‌ ಅವರಿಗೆ ಒಳ್ಳೆಯ ಹೆಸರು ಬಂದಿತ್ತು, ಹಾಗಾಗಿ ಮತ್ತೊಮ್ಮೆ ಇವರಿಬ್ಬರ ಕಾಂಬಿನೇಷನ್‌ನ ಸಿನಿಮಾ ನೋಡಲು ಅಭಿಮಾನಿಗಳು ವೇಟ್‌ ಮಾಡ್ತಾ ಇದಾರೆ.

-masthmagaa.com

Contact Us for Advertisement

Leave a Reply