ಸತ್ತವರ ಆಸ್ತಿಯಿಂದ ಸಾವಿರಾರು ಕೋಟಿ ಮಾಡಿದ ಬ್ರಿಟನ್‌ ರಾಜ!

masthmagaa.com:

ಸತ್ತವರ ಆಸ್ತಿಗಳಿಂದ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಭಾರೀ ಆಸ್ತಿ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಬ್ರಿಟನ್‌ನಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಬ್ರಿಟನ್‌ನಲ್ಲಿ ಆಸ್ತಿ ವಿಲ್‌ ಮಾಡದೇ ಸತ್ತವರ ಅಥ್ವಾ ವಾರಸುದಾರರಿಲ್ಲದ ಆಸ್ತಿಗಳಿಂದ ಚಾರ್ಲ್ಸ್‌ ಕೋಟಿಗಟ್ಟಲೆ ಹಣ ಮಾಡಿಕೊಂಡಿದ್ದಾರೆ ಅಂತ ಆರೋಪಿಸಲಾಗಿದೆ.‌ ಅಂದ್ಹಾಗೆ ಬ್ರಿಟನ್‌ನಲ್ಲಿ ಈ ಹಿಂದೆ ʻbona vacantiaʼ (ಬೋನಾ ವೆಕನ್ಷಿಯಾ) ಅನ್ನೋ ಪದ್ಧತಿ ಇತ್ತು. ಬೋನಾ ವೆಕನ್ಷಿಯಾ ಅಂದ್ರೆ ಖಾಲಿ ಸರಕುಗಳು ಅಂತ ಅರ್ಥ. ಈ ಪದ್ಧತಿ ಪ್ರಕಾರ ಬ್ರಿಟನ್‌ನಲ್ಲಿ ಯಾರೇ ಆಗ್ಲಿ, ತಮ್ಮ ಆಸ್ತಿಗೆ ವಾರಸುದಾರರನ್ನ ನೇಮಕ ಮಾಡದೇ ಸತ್ರೆ ಅವ್ರ ಆಸ್ತಿ ಬ್ರಿಟನ್‌ ರಾಜ ಅಥವಾ ರಾಣಿ ಪಾಲಾಗುತ್ತೆ. ಸುಮಾರು 1265ರಿಂದಲೂ ಬ್ರಿಟನ್‌ ರಾಜರುಗಳು ಈ ರೀತಿ ಅನಾಥ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ತಾ ಬಂದಿದ್ರು. 1925ರಲ್ಲಿ ಬ್ರಿಟನ್‌ ಸಂಸತ್ತು ಈ ಪದ್ದತಿಯನ್ನ ಕಾನೂನಾಗಿ ಮಾಡಿತ್ತು. ಎರಡನೇ ವಿಶ್ವಯುದ್ಧದಲ್ಲಂತೂ ರಾಜ ಆರನೇ ಜಾರ್ಜ್‌ ಯುದ್ಧದಲ್ಲಿ ಮಡಿದ ಅದೆಷ್ಟೋ ಸೈನಿಕರ ಆಸ್ತಿಯನ್ನ ಪಡೆದುಕೊಂಡಿದ್ದ ಎನ್ನಲಾಗಿದೆ. ಈ ಆಸ್ತಿಗಳನ್ನ ಬಾಡಿಗೆಗೆ, ಕಮರ್ಷಿಯಲ್‌ ಕಟ್ಟಡಗಳಿಗೆ ನೀಡಿ ಆದಾಯ ಹರಿದು ಬರುವಂತೆ ಮಾಡಲಾಗ್ತಿತ್ತು. ಆದ್ರೆ ಮುಂದಿನ ದಿನಗಳಲ್ಲಿ ಈ ಪದ್ದತಿಯನ್ನ ಸ್ಟಾಪ್‌ ಮಾಡಲಾಗಿತ್ತು. ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಆ ರೀತಿ ಓನರ್‌ ಇಲ್ಲದ ಆಸ್ತಿಗಳು ಟ್ರೆಶರಿಗೆ ಹೋಗ್ತಿತ್ತು. ಆದ್ರೆ ಲ್ಯಾನ್ಕ್ಯಾಸ್ಟರ್‌ ಮತ್ತು ಕಾರ್ನ್‌ವಾಲ್‌ ಅನ್ನೋ ಎರಡು ಪ್ರದೇಶದಲ್ಲಿ ಮಾತ್ರ ಈ bona vacantia ಚಾಲ್ತಿಯಲ್ಲಿತ್ತು. ಅಲ್ಲಿನ ಅನಾಥ ಆಸ್ತಿಗಳು ರಾಯಲ್‌ ಫ್ಯಾಮಿಲಿಯನ್ನ ಸೇರ್ತಿತ್ತು. ಆದ್ರೆ ಇದನ್ನ ಕೆಲವರು ಪ್ರಶ್ನಿಸಿದಾಗ, ರಾಯಲ್‌ ಫ್ಯಾಮಿಲಿ ಇಲ್ಲ ನಾವದನ್ನ ಚಾರಿಟಿಗೆ ಅಂದ್ರೆ ದಾನ ದತ್ತಿ ಕಾರ್ಯಕ್ರಮಗಳಿಗೆ ಬಳಸ್ತೀವಿ ಅಂತ ಹೇಳಿತ್ತು. ಈಗ ಈ ಕುರಿತು ಬ್ರಿಟನ್‌ನ ಗಾರ್ಡಿಯನ್‌ ಪತ್ರಿಕೆ ತನಿಖೆ ನಡೆಸಿದ್ದು, ರಾಜ ಚಾರ್ಲ್ಸ್‌ ಈ ಪದ್ಧತಿಯನ್ನ ದುರುಪಯೋಗ ಮಾಡ್ಕೊಂಡು ತಮ್ಮ ಆಸ್ತಿಯನ್ನ ಹೆಚ್ಚು ಮಾಡ್ಕೊಳ್ತಿದ್ದಾರೆ ಅಂತ ಆರೋಪ ಮಾಡಿದೆ. ಈ ಹಣದಿಂದ ರಾಯಲ್‌ ಫ್ಯಾಮಿಲಿ ಮಾಲೀಕತ್ವದ ಹಾಲಿಡೇ ರೆಸಾರ್ಟ್‌ಗಳು, ಟೌನ್‌ ಹೌಸ್‌ಗಳು, ರೂರಲ್‌ ಕಾಟೇಜ್‌ಗಳು, ಅಗ್ರಿಕಲ್ಚರ್‌ ಬಿಲ್ಡಿಂಗ್‌ ಸೇರಿದಂತೆ ಹಲವು ಕಮರ್ಷಿಯಲ್‌ ಕಟ್ಟಡಗಳನ್ನ ರಿಡೆವಲಪ್‌ ಮಾಡೋಕೆ ಬಳಸಲಾಗ್ತಿದೆ ಎನನ್ಲಾಗಿದೆ. ಗಾರ್ಡಿಯನ್‌ ವರದಿ ಪ್ರಕಾರ, ಕಳೆದ ವರ್ಷ ಕೇವಲ ಲ್ಯಾನ್ಕ್ಯಾಸ್ಟರ್‌ ಒಂದರಿಂದಲೇ ಬ್ರಿಟನ್‌ ರಾಜ ಸತ್ತ ಜನರ ಆಸ್ತಿಯಿಂದ 26 ಮಿಲಿಯನ್‌ ಪೌಂಡ್‌ ಅಂದ್ರೆ ಸುಮಾರು 271.6 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ಕಳೆದ 10 ವರ್ಷದಲ್ಲಿ ರಾಯಲ್‌ ಫ್ಯಾಮಿಲಿ ಸುಮಾರು 624 ಕೋಟಿ ಮಾಡ್ಕೊಂಡಿದೆ ಅಂತ ತಿಳಿಸಿದೆ. ಆದ್ರೆ ಈಗ ಕೇಳಿ ಬಂದಿರೋ ಆರೋಪದ ಬಗ್ಗೆ ರಾಯಲ್‌ ಫ್ಯಾಮಿಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

-masthmagaa.com

Contact Us for Advertisement

Leave a Reply