ಸೆಲ್ಫಿ ತೆಗೆದುಕೊಳ್ಳೊಕೆ ಬಂದವನ ಮೇಲೆ ಹಲ್ಲೆಗೆ ಯತ್ನಿಸಿದ ಶಕೀಬ್!

masthmagaa.com:

ತನ್ನ ಉತ್ತಮ ಆಟದಷ್ಟೇ ಆಗಾಗ ವಿವಾದಗಳಿಂದಲೂ ಸುದ್ದಿಯಾಗೊ ಬಾಂಗ್ಲಾದೇಶದ ಸ್ಟಾರ್‌ ಆಟಗಾರ ಶಕೀಬ್‌ ಅಲ್‌ ಹಸನ್‌ ಈಗ ಮತ್ತೊಂದು ಯಡವಟ್ಟು ಮಾಡ್ಕೊಂಡಿದ್ದಾರೆ. ಸದ್ಯ‌ ಢಾಕಾ ಪ್ರಿಮಿಯರ್‌ ಲೀಗ್‌ನಲ್ಲಿ ಶೇಖ್‌ ಜಮಾಲ್‌ ಧನ್ಮಂಡಿ ಕ್ಲಬ್‌ ಪರ ಆಡ್ತಿರೊ ಶಕೀಬ್ ಪಂದ್ಯವೊಂದ್ರ ಟಾಸ್‌ ವೇಳೆ ಮೈದಾನಕ್ಕೆ ತೆರಳಿದ್ದಾರೆ. ಈ ವೇಳೆ ವ್ಯಕ್ತಿಯೊರ್ವ ಮೈದಾನಕ್ಕೆ ಬಂದು ಶಕೀಬ್‌ರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಯತ್ನಿಸಿದ. ಈ ವೇಳೆ ಅವನೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಶಕೀಬ್ ನಿರಾಕರಿಸಿದ್ರು. ಆದ್ರೆ ಆ ವ್ಯಕ್ತಿ ಇನ್ನಷ್ಟು ಪೋರ್ಸ್‌ ಮಾಡ್ದಾಗ ರೊಚ್ಚಿಗೆದ್ದ ಶಕೀಬ್‌ ಆ ವ್ಯಕ್ತಿಯ ಕುತ್ತಿಗೆಯನ್ನ ಹಿಡಿದು ಥಳಿಸಿದ್ದಾರೆ. ಸದ್ಯ ಈ ಬಗೆಗಿನ ವಿಡಿಯೋ ಕೂಡ ವೈರಲ್‌ ಆಗಿದ್ದು, ಶಕೀಬ್‌ ವಿರುದ್ದ ವ್ಯಾಪಾಕ ಟೀಕೆಗಳು ಕೇಳಿ ಬರ್ತಿವೆ.

-masthmagaa.com

Contact Us for Advertisement

Leave a Reply