ಟ್ರಾನ್ಸ್‌ಜೆಂಡರ್‌ ಕುರಿತು ರಿಷಿ ಸುನಾಕ್‌ ವಿವಾದಾತ್ಮಕ ಹೇಳಿಕೆ!

masthmagaa.com:

ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್ ಟ್ರಾನ್ಸ್‌ಜೆಂಡರ್‌ ಬಗ್ಗೆ ನೀಡಿರೊ ಹೇಳಿಕೆ ವಿವಾದವನ್ನ ಸೃಷ್ಠಿಸಿದೆ. 2023ರ ಕನ್ಸರ್ವೇಟಿವ್‌ ಪಾರ್ಟಿ ಕಾನ್ಫರೆನ್ಸ್‌ನಲ್ಲಿ ಮಾತಾಡಿದ ಸುನಾಕ್, ಹುಡುಗ ಹುಡುಗಾನೇ ಹಾಗೂ ಹುಡುಗಿ ಹುಡುಗಿನೇ ಎಂದಿದ್ದಾರೆ. ಜನರು ತಮಗೆ ಬೇಕಾದ ಲಿಂಗವನ್ನ ಹೊಂದಬಹುದು ಅನ್ನೊದನ್ನ ನಂಬೋಕೆ ಆಗಲ್ಲ. ಅದು ಸಾಧ್ಯವಿಲ್ಲ. ಎಷ್ಟೇ ಆದ್ರೂ ಹುಡುಗ ಹುಡುಗಾನೇ ಹಾಗೂ ಹುಡುಗಿ ಹುಡುಗಿನೇ. ಅದು ಕಾಮನ್‌ಸೆನ್ಸ್‌ ಅಂತ ಹೇಳಿದ್ದಾರೆ. ಇವರ ಹೇಳಿಕೆ ಬೆನ್ನಲ್ಲೇ ಕೆಲವರು ಸುನಾಕ್‌ ಮಾತನ್ನ ಸಪೋರ್ಟ್‌ ಮಾಡಿದ್ರೆ, ಬಹುತೇಕ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟ್ರಾನ್ಸ್‌ಜೆಂಡರ್‌ ಸಮುದಾಯದ ವಿರುದ್ಧ ಅಗೌರವದ ಮಾತುಗಳನ್ನಾಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸುನಾಕ್‌ ಅವ್ರ ಮಾತುಗಳು ಕಾಮನ್‌ ಸೆನ್ಸ್‌ನಿಂದ ದೂರಯಿವೆ ಅಂತ ಟೀಕಿಸಿದ್ದಾರೆ.

 

-masthmagaa.com

Contact Us for Advertisement

Leave a Reply