ಮತ್ತೆ ಸಿನಿಮಾ ಮಾಡ್ತಾರೆ `ಸಿಂಪಲ್’ ಬೆಡಗಿ..! ಯಾವುದು ಸಿನಿಮಾ..?

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ಬೆಡಗಿ ಶ್ವೇತ ಶ್ರೀವಾತ್ಸವ್ ಮತ್ತೆ ಸ್ಯಾಂಡಲ್‍ವುಡ್‍ಗೆ ಬರ್ತಿದ್ದಾರೆ. ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿರೋ ಶ್ವೇತಾ ಶ್ರೀವಾತ್ಸವ್, ಎಲ್ಲರಿಗೂ ನಮಸ್ಕಾರ, ಹಬ್ಬದ ಶುಭಾಶಯಗಳು. ಇಂದು ನನ್ನ ಒಂದು ಸಂತಸದ ವಿಷಯವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ, ತುಂಬಾ ಸಮಯದ ಬಳಿಕ ನಾನು ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ. ಈ ಹೊಸ ಸಿನಿಮಾದಲ್ಲಿ ನಾನು ಸೂಪರ್ ಕಾಪ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ನಿಮ್ಮ ಬೆಂಬಲ ಮತ್ತು ಆರ್ಶೀವಾದ ಸದಾ ಹೀಗೆ ಇರಲಿ ಫ್ರೆಂಡ್ಸ್ ಎಂದು ಮನವಿ ಮಾಡಿದ್ದಾರೆ. ಜೊತೆಗೆ ರಹದಾರಿ ಎಂಬ ಹೆಸರು ಕೂಡ ಫಿಕ್ಸ್ ಆಗಿದ್ದು, ಗಿರೀಶ್ ವೈರಮಡಿ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ರೋಣದ ಬಕ್ಕೇಶ್ ಮತ್ತು ಕೆಸಿ ರಾವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಾಬರಿ ಥ್ರಿಲ್ಲರ್ ಸಿನಿಮಾ ಇದಾಗಿದೆ ಅಂತ ಬರೆದುಕೊಂಡಿದ್ದಾರೆ.

https://www.instagram.com/p/B3TbUrtjKcC/?utm_source=ig_web_copy_link

Contact Us for Advertisement

Leave a Reply