ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ 3 ಲಕ್ಷ ಜನರಿಗೆ ಸಿಕೆಲ್‌ ಸೆಲ್‌ ಅನೀಮಿಯಾ ಟೆಸ್ಟ್‌!

masthmagaa.com:

ರಾಜ್ಯದಲ್ಲಿ ಸಿಕಲ್‌ ಸೆಲ್‌ ಅನೀಮಿಯಾ ರೋಗ ವನ್ನು ನಿವಾರಿಸೋಕೆ ಆರೋಗ್ಯ ಇಲಾಖೆಯು ಬುಡಕಟ್ಟು ಪ್ರದೇಶಗಳಲ್ಲಿ 3 ಲಕ್ಷ ಜನರನ್ನು ಟೆಸ್ಟ್‌ ಮಾಡೋಕೆ ಮುಂದಾಗಿದೆ. ಜೊತೆಗೆ ಈ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಲಾಗ್ತಿದೆ ಅಂತ ಸರ್ಕಾರ ತಿಳಿಸಿದೆ. ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಮಟ್ಟದ ಸಭೆ ಕರೆದು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಮುಂದಿನ ದಿನಗಳಲ್ಲಿ 3 ಲಕ್ಷ ಬುಡಕಟ್ಟು ಜನರನ್ನ ತಪಾಸಣೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಗುಂಡೂರಾವ್‌ ಸೂಚನೆ ನೀಡಿದ್ದಾರೆ. ಅಂದ್ಹಾಗೆ ಸಿಕಲ್‌ ಸೆಲ್‌ ಅನೀಮಿಯಾ ರೋಗ ಒಂದು ಅನುವಂಶೀಯವಾಗಿ ಬರೋ ಖಾಯಿಲೆಯಾಗಿದ್ದು, ಕೆಂಪು ರಕ್ತ ಕಣಗಳಲ್ಲಿ ಆಕ್ಸಿಜನ್‌ ಸಾಗಾಟ ಮಾಡೋ ಹಿಮೋಗ್ಲೋಬಿನ್‌ ಪ್ರೋಟೀನ್‌ಗಳಲ್ಲಿ ತೊಂದ್ರೆ ಉಂಟಾದಾಗ ಈ ರೋಗ ಬರುತ್ತೆ.

-masthmagaa.com

Contact Us for Advertisement

Leave a Reply