ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ! ಕೇಂದ್ರದ ವಿರುದ್ಧ ವಾಗ್ದಾಳಿ!

masthmagaa.com:

ದೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜಟಾಪಟಿ ವಿಪರೀತಕ್ಕೆ ಹೋಗ್ತಿದ್ದು ಈಗ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗ್ತಿದೆ ಅಂತೇಳಿ ದಕ್ಷಿಣದ ರಾಜ್ಯಗಳು ಪ್ರತಿಭಟನೆ ನಡೆಸಿವೆ. ಕರ್ನಾಟಕ ರಾಜ್ಯ ಸರ್ಕಾರ‌ ಕೇಂದ್ರ ಸರ್ಕಾರದ ವಿರುದ್ದ ಬೃಹತ್‌ ಪ್ರತಿಭಟನೆ ನಡೆಸಿದೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ಈ ಪ್ರತಿಭಟನೆ ನಡೆದಿದೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ʻಕೇಂದ್ರ ಸರ್ಕಾರ ಕರ್ನಾಟಕ ಮತ್ತು ಇತರೆ ದಕ್ಷಿಣದ ರಾಜ್ಯಗಳಿಗೆ ಮಾಡಿದಂತಹ ಭೇದಭಾವವನ್ನ ನಾವು ಖಂಡಿಸ್ತೇವೆ. ಕರ್ನಾಟಕಕ್ಕೆ ಆಗ್ತಿರೋ ನಷ್ಟವನ್ನ ತಡೆಯೋಕೆ ಹಳೆ ಸಿಸ್ಟಮ್‌ ವಾಪಾಸ್‌ ತರಬೇಕು ಅಂತ ಒತ್ತಾಯ ಮಾಡಿದ್ದಾರೆ. ಇತ್ತ ಡಿಕೆ ಶಿವಕುಮಾರ ಮಾತನಾಡಿ,ʻʻತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೇಶದ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡ್ತಿದ್ದೇವೆ. ನಾವು ನಮ್ಮ ಹಕ್ಕು ಮತ್ತು ಪಾಲನ್ನ ಕೇಳ್ತಿದ್ದೀವಿ ಅಷ್ಟೇ ಅಂತ ಹೇಳಿದ್ದಾರೆ. ಇನ್ನು ಕೇಂದ್ರ ಸರ್ಕಾರದ ವಿರುದ್ದ ನಡೆಯುತ್ತಿರೋ ಈ ಪ್ರತಿಭಟನೆಗೆ ನಾಳೆ ಕೇರಳ ಹಾಗೂ ತಮಿಳುನಾಡು ಕೂಡ ಭಾಗಿಯಾಗಲಿವೆ. ನಾಳೆ ಅಂದರೆ ಫೆಬ್ರವರಿ 8ನೇ ತಾರೀಖು ಕೇರಳ ಸಿಎಂ ಪಿಣರಾಯಿ ವಿಜಯನ್‌ ಮತ್ತು ಕ್ಯಾಬಿನೆಟ್‌ ಸದಸ್ಯರು ಪ್ರತಿಭಟಿಸಲಿದ್ದಾರೆ. ಇನ್ನು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗೋದಾಗಿ ಅನೌನ್ಸ್‌ ಮಾಡಿದ್ದಾರೆ. ಅತ್ತ ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಸರ್ಕಾರ ಪ್ರತಿಭಟಿಸ್ತಿದ್ರೆ, ಇತ್ತ ಕರ್ನಾಟಕ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಬೀದಿಗಿಳಿದಿದೆ. ಬಿಜೆಪಿ ನಾಯಕರೆಲ್ಲಾ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದಾರೆ. ವಿಧಾನಸೌಧದಲ್ಲಿರೋ ಸಿಎಂ ಸಿದ್ಧರಾಮಯ್ಯನವ್ರ ಚೇಂಬರ್‌ಗೆ ಬೀಗ ಹಾಕೋಕೆ ಟ್ರೈ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply