INDI ಮೈತ್ರಿಕೂಟ ನಿಶ್ಚಿತ ಬಹುಮತ ಪಡೆಯಲ್ಲ: ಸಿಎಂ ಸಿದ್ದರಾಮಯ್ಯ!

masthmagaa.com:

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ INDI ಮೈತ್ರಿಕೂಟ ನಿಶ್ಚಿತ ಮೆಜಾರಿಟಿ ಪಡೆಯೊದಿಲ್ಲ ಅಂತ ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಯುದ್ದಕ್ಕೆ ಮೊದ್ಲೆ ಶಸ್ತ್ರತ್ಯಾಗ ಮಾಡಿದ ಹಾಗೇ ಮಾತಾಡಿರೊ ಸಿಎಂ, ಅತ್ತ NDA ಕೂಡ ನಿಶ್ಚಿತ ಬಹುಮತದ ಸ್ಥಾನಗಳನ್ನ ಪಡೆಯೊದಿಲ್ಲ ಅಂತೇಳಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಬ್ಯಾಲೆನ್ಸಿಂಗ್‌ ಹೇಳಿಕೆ ನೀಡಿದ್ದಾರೆ. ಅಲ್ದೇ INDI ಮೈತ್ರಿಕೂಟ ಮೆಜಾರಿಟಿ ಗಳಿಸಲು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಒಡಿಶಾದಲ್ಲಿ ಬಿಜೆಡಿ ಹಾಗೂ ಸಿಪಿಐ(ಎಂ) ಸೇರಿದಂತೆ ಕೆಲ ಪಾರ್ಟಿಗಳ ಮೇಲೆ ಡಿಪೆಂಡ್‌ ಆಗ್ಬೇಕಾಗುತ್ತೆ ಅಂತೇಳಿ ಭವಿಷ್ಯ ನುಡಿದಿದ್ದಾರೆ. ಇನ್ನು ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 2ವರೆ ವರ್ಷಗಳ ನಂತ್ರ ಡಿಕೆಶಿ ಅವ್ರಿಗೆ ಸಿಎಂ ಸ್ಥಾನ ಬಿಟ್ಟು ಕೊಡೊ ವಿಚಾರವಾಗಿ ಕೇಳಲಾದ ಪ್ರಶ್ನೆಗೂ ಸಿಎಂ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಹೈಕಮಾಂಡ್‌ ಒಪ್ಪಿಗೆ ಸೂಚಿಸಿದ್ರೆ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ. ಇಲ್ಲಾ ಅಂದ್ರೆ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ದವಾಗಿರ್ತಿನಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply