ಈ ವಾರ ವೀಕೆಂಡ್ ವಿತ್ ರಮೇಶ್‌ನ ಹಾಟ್‌ ಸೀಟ್‌ನಲ್ಲಿ ಸಿಹಿ ಕಹಿ ಚಂದ್ರು ಹಾಗೂ ಗುರುರಾಜ ಕರಜಗಿ !

masthmagaa.com:

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 ಪ್ರಾರಂಭವಾಗಿದ್ದು ಈಗಾಗಲೇ 7 ಅತಿಥಿಗಳು ರಮೇಶ್‌ ಅರವಿಂದ್‌ ಜೊತೆ ತಮ್ಮ ಜೀವನದ ಸಿಹಿಕಹಿ ಘಟನೆ ಹಂಚಿಕೊಂಡಿದ್ದಾರೆ. ಕಳೆದ ವಾರ ಖ್ಯಾತ ನಟರಾದ ಅವಿನಾಶ್ ಮತ್ತು ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದರು. ಈ ವಾರದ ಆತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಈ ವಾರ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವುದು ಸಿಹಿ ಕಹಿ ಚಂದ್ರು, ಮತ್ತೊಬ್ಬರು ಡಾ. ಗುರುರಾಜ ಕರಜಗಿ.

ಖ್ಯಾತ ನಟ, ರಂಗಭೂಮಿ ಕಲಾವಿದ ಸಿಹಿ ಕಹಿ ಚಂದ್ರು ಈ ವಾರದ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1990ರಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಸಿಹಿ ಕಹಿ ಚಂದ್ರು ಇತ್ತೀಚಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಖ್ಯಾತಿಗಳಿಸಿರುವ ಸಿಹಿ ಕಹಿ ಚಂದ್ರು ನಟನೆ ಜೊತೆಗೆ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಸದ್ಯ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧಾರಾವಾಹಿ ಜೊತೆಗೆ ಬಿಗ್ ಬಾಸ್ ನಲ್ಲೂ ಸ್ಪರ್ಧಿಯಾಗಿ ಭಾಗಿಯಾಗಿದ್ದರು.

ಖ್ಯಾತ ಶಿಕ್ಷಣ ತಜ್ಞರಾಗಿರುವ ಗುರುರಾಜ ಕರಜಗಿ 22 ಕ್ಕೂಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ-ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ ಶೀಲತೆ, ಸಂವಹನಕಲೆ ಮುಂತಾದವುಗಳಲ್ಲಿ ಆಸಕ್ತಿ ಹೊಂದಿರುವ ಡಾ.ಕರಜಗಿ ತಮ್ಮ ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ಚಿರಪರಿಚಿತರು. ವಿ.ವಿ.ಎಸ್.ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ16 ವರ್ಷಗಳು ಪ್ರಾಂಶುಪಾಲರಾಗಿ, ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯ ಸ್ಥಾಪಕ ಪ್ರಾಂಶುಪಾಲರಾಗಿ ಹಾಗು ನಿರ್ದೇಶಕರಾಗಿ, ಅಂತಾರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

-masthmagaa.com

Contact Us for Advertisement

Leave a Reply