ಪ್ರಧಾನಿ ವಿರುದ್ಧ ಬರೆದ ಬ್ಲಾಗರ್​​​ಗೆ 72 ಲಕ್ಷ ದಂಡ!

masthmagaa.com:

ಸಿಂಗಾಪುರ್ ಮೂಲದ ಬ್ಲಾಗರ್ ಒಬ್ಬರಿಗೆ 1 ಲಕ್ಷ ಡಾಲರ್ ಅಂದ್ರೆ 72 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಲಿಯೋಂಗ್ ಝೆ ಹಿಯಾನ್ ಅನ್ನೋ ಬ್ಲಾಗರ್ ಒಬ್ಬರು ಪ್ರಧಾನಿ ಲೀ ಸಿಯೇನ್ ಲೂಂಗ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಒಂದು ಆರ್ಟಿಕಲ್ ಬರೆದಿದ್ರು. ಅದನ್ನು ಫೇಸ್​ಬುಕ್​​ನಲ್ಲಿ ಪ್ರಕಟ ಕೂಡ ಮಾಡಿದ್ರು. ಆದ್ರೆ ತನ್ನ ವಿರುದ್ಧ ಲಿಯಾಂಗ್ ತಪ್ಪು ಮಾಹಿತಿ ನೀಡ್ತಿದ್ದಾರೆ.

ತನ್ನ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ಆಧಾರರಹಿತ ಅಂತ ಪ್ರಧಾನಿ ಲೀ ಸಿಯೇನ್ ಲೂಂಗ್ ಕೋರ್ಟ್​ ಮೆಟ್ಟಿಲೇರಿದ್ದರು. ಅದರಂತೆ ವಿಚಾರಣೆ ನಡೆಸಿದ ಕೋರ್ಟ್​​ ಪ್ರಧಾನಿ ಲೀ ಪರವಾಗಿ ತೀರ್ಪು ನೀಡಿದ್ದು, ಲಿಯೋಂಗ್ ಝೆ ಹಿಯಾನ್​​​ 72 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply