ಸಿಂಗಾಪುರ್‌ನಲ್ಲಿ ಕೋವಿಡ್‌ ಕಳವಳ! ಈ ಸಂಖ್ಯೆ ಏರಿದೆ. ಅಂದ್ರೆ ಒಂದೇ ವಾರದಲ್ಲಿ ಸಾವಿರಾರು ಪ್ರಕರಣಗಳು!

masthmagaa.com:

ಇತ್ತೀಚಿಗೆ ಸಿಂಗಾಪುರ್ ದೇಶದಲ್ಲಿ ಕೋವಿಡ್‌19 ಕೇಸ್‌ಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಭೀತಿಗೆ ಒಳಗಾಗಿರೋ ಸಿಂಗಾಪುರ್‌ ಹಾಸ್ಪಿಟಲ್‌ಗಳು ತಮ್ಮ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ತಿವೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಕಳೆದ 2 ವಾರದಿಂದ ಹೆಚ್ಚುತ್ತಿರೋ ಕೋವಿಡ್‌ ಪ್ರಕರಣಗಳಿಂದಾಗಿ ರೋಗಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಆದ್ರೆ ರೋಗಿಗಳ ಸಂಖ್ಯೆಗನುಗುಣವಾಗಿ ಆಸ್ಪತ್ರೆಗಳ ಅಭಾವ ಇದೆ. ಹೀಗಾಗಿ ಆಸ್ಪತ್ರೆಗಳ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳೊ ಅನಿವಾರ್ಯತೆ ಎದುರಾಗಿದೆ. ನವೆಂಬರ್‌ 26 ರಲ್ಲಿ 22 ಸಾವಿರ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ವು ಆದ್ರೆ ಡಿಸೆಂಬರ್‌ ಮೊದಲ ವಾರದ ಹೊತ್ತಿಗೆ 32 ಸಾವಿರಕ್ಕೆ ಈ ಸಂಖ್ಯೆ ಏರಿದೆ. ಅಂದ್ರೆ ಒಂದೇ ವಾರದಲ್ಲಿ 10 ಸಾವಿರ ಪ್ರಕರಣಗಳು ಜಾಸ್ತಿಯಾಗಿದ್ದು, ಮುಂದ್ಯಾವ ಪರಿಸ್ಥಿತಿ ಎದುರಾಗುತ್ತೋ ಅಂತ ಸಿಂಗಾಪುರ್‌ ಆತಂಕಕ್ಕೆ ಒಳಗಾಗಿದೆ.

-masthmagaa.com

Contact Us for Advertisement

Leave a Reply