ಸಿಂಗಾಪುರ್ ಥಳಿ ಅಲ್ಲ: ಫೇಸ್​​ಬುಕ್, ಟ್ವಿಟ್ಟರ್​​​ಗೆ ನೋಟಿಸ್

masthmagaa.com:

ಸಿಂಗಾಪುರ್​​ನಲ್ಲಿ ಕೊರೋನಾದ ಹೊಸ ಥಳಿ ರೂಪಾಂತರಗೊಂಡಿದೆ ಅನ್ನೋ ವಿಚಾರವನ್ನು ಅಲ್ಲಿನ ಸರ್ಕಾರ ಒಪ್ಪುತ್ತಿಲ್ಲ. ನಿನ್ನೆಯಷ್ಟೇ ದೆಹಲಿ ಸಿಎಂ ಕೇಜ್ರಿವಾಲ್​​​ಗೆ ತಿರುಗೇಟು ಕೊಟ್ಟಿದ್ದ ಸಿಂಗಾಪುರ್​​ ಈಗ ಟ್ವಿಟ್ಟರ್ ಮತ್ತು ಫೇಸ್​​ಬುಕ್​​​​ಗೂ ಬಿಸಿ ಮುಟ್ಟಿಸಿದೆ. ಟ್ವಿಟ್ಟರ್ ಮತ್ತು ಫೇಸ್​​ಬುಕ್​​ಗಳಲ್ಲಿ ಸಿಂಗಾಪುರ್​ ಮೂಲದ ರೂಪಾಂತರಿ ವೈರಾಣು ಅಂತ ತಪ್ಪು ಮಾಹಿತಿ ನೀಡಲಾಗ್ತಿದೆ. ಸಿಂಗಾಪುರ್​ನಲ್ಲಿ ಮಕ್ಕಳಿಗೂ ಹರಡುತ್ತಿರೋದು ಈಗಾಗಲೇ ಭಾರತದಲ್ಲಿ ಪತ್ತೆಯಾಗಿರೋ B16172 ವೈರಾಣೇ ಹೊರತು ಬೇರೆಯಲ್ಲ.. ಹೀಗಾಗಿ ತನ್ನ ಬಳಕೆದಾರರು ತಪ್ಪು ಸಂದೇಶವನ್ನು ತಿದ್ದುಕೊಳ್ಳುವಂತೆ ಫೇಸ್​ಬುಕ್ ಮತ್ತು ಟ್ವಿಟ್ಟರ್ ನೋಟಿಸ್ ನೀಡಬೇಕು ಅಂತ ಸಿಂಗಾಪುರ್ ಸರ್ಕಾರ ಆದೇಶಿಸಿದೆ. ದೇಶದ ಫೇಕ್​ ನ್ಯೂಸ್ ಕಾನೂನಿನ ಅಡಿಯಲ್ಲಿ ಈ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply