BIG BREAKING: ಮಂಗಳೂರಿನಲ್ಲಿ 6 ಕಾಗೆಗಳು ಸತ್ತಿದ್ದು ಹಕ್ಕಿಜ್ವರದಿಂದ ಅಲ್ಲ!

masthmagaa.com:

ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿ ಬಳಿ ಇತ್ತೀಚೆಗೆ ಸತ್ತುಬಿದ್ದಿದ್ದ 6 ಕಾಗೆಗಳಿಗೆ ಹಕ್ಕಿಜ್ವರ ಬಂದಿರಲಿಲ್ಲ ಅಂತ ಪರೀಕ್ಷಾ ವರದಿಯಲ್ಲಿ ಗೊತ್ತಾಗಿದೆ. ಕಾಗೆಗಳ ಕಳೇಬರ ಸಿಕ್ಕಿದ್ದರಿಂದ ಅವುಗಳು ಹಕ್ಕಿಜ್ವರದಿಂದಲೇ ಸತ್ತಿರಬಹುದು ಅಂತ ಹೇಳಲಾಗಿತ್ತು. ಅಲ್ಲದೆ ಕಾಗೆಗಳ ಸ್ಯಾಂಪಲ್​ ಅನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಪರೀಕ್ಷಾ ವರದಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಸೇರಿದ್ದು, ಅದರಲ್ಲಿ ಕಾಗೆಗಳು ಹಕ್ಕಿಜ್ವರದಿಂದ ಸತ್ತಿಲ್ಲ ಅಂತ ಹೇಳಲಾಗಿದೆ. ಈ ಮೂಲಕ ಮಂಜನಾಡಿ, ದಕ್ಷಿಣ ಕನ್ನಡ ಮತ್ತು ಇಡೀ ರಾಜ್ಯದ ಜನ ನಿಟ್ಟುಸಿರು ಬಿಡುವಂತಾಗಿದೆ. ಕೇರಳದಲ್ಲಿ ಈಗಾಗಲೇ ಹಕ್ಕಿಜ್ವರದಿಂದ ನೂರಾರು ಹಕ್ಕಿಗಳು ಸತ್ತಿರೋದ್ರಿಂದ ಅಲ್ಲಿಂದಲೇ ಕರ್ನಾಟಕಕ್ಕೂ ಹಕ್ಕಿಜ್ವರ ಹರಡಿರಬಹುದು ಅನ್ನೋ ಆತಂಕ ಮೂಡಿತ್ತು. ಇದೀಗ ಆ ಆತಂಕಕ್ಕೆ ತೆರೆ ಬಿದ್ದಿದೆ. ಕೇಂದ್ರ ಸರ್ಕಾರದ ಪ್ರಕಾರದ ದೇಶದಲ್ಲಿ ಇದುವರೆಗೆ 6 ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ – ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಗುಜರಾತ್.

-masthmagaa.com

Contact Us for Advertisement

Leave a Reply