40 ವರ್ಷಗಳ ಬಳಿಕ ಹಿಮದಡಿ ಸಿಕ್ತು ನಾಪತ್ತೆಯಾದವನ ಅವಶೇಷ!

masthmagaa.com:

40 ವರ್ಷಗಳಿಗೂ ಹಿಂದೆ ಹಿಮದಲ್ಲಿ ಸ್ಕೀಯಿಂಗ್ ಮಾಡಲು ಹೋಗಿದ್ದ ಜರ್ಮನ್ ಸ್ಕೀಯರ್ ರುಡಿ ಮೋಡರ್ ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ದೇಹದ ಕುರುಹು ಕೂಡ ಸಿಕ್ಕಿರಲಿಲ್ಲ. ಆದರೆ ಈಗ ಕಡೆಗೂ ಅಮೆರಿಕದ ಕೊಲಾರಾಡೋದ ಹಿಮ ಶಿಖರಗಳ ಮಂಜಿನ ಪದರದ ಅಡಿಯಲ್ಲಿ ಒಂದು ಅಸ್ತಿಪಂಜರದಂತಹ ಅವಶೇಷ ಸಿಕ್ಕಿದೆ. ಇದು ರುಡಿ ಮೋಡರ್ ಅವರದ್ದೇ ಅಂತಾ ಅಂದಾಜು ಮಾಡಲಾಗಿದೆ. ನಾಪತ್ತೆಯಾದಾಗ ಅವರ ವಯಸ್ಸು ಕೇವಲ 27. 1983 ಫೆಬ್ರವರಿ 13 ನೇ ತಾರೀಕು ರುಡಿ ನಾಪತ್ತೆಯಾದಾಗ ನಾಲ್ಕು ದಿನಗಳ ಕಾಲ ರೆಸ್ಕ್ಯೂ ಆಪರೇಷನ್ ನಡೆಸಲಾಗಿತ್ತು. ಆದರೆ ಆಗ ಸಿಕ್ಕಿರಲಿಲ್ಲ.‌ ಆದರೆ ಇತ್ತೀಚೆಗೆ ಅಸ್ತಿಪಂಜರದಂತಹ ವಿಶೇಷ, ಸ್ಕೀಯಿಂಗ್ ಬೂಟು, ಪೋಲ್ ಎಲ್ಲಾ ಪತ್ತೆಯಾಗಿದೆ. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ರುಡಿಯ ತಾಯಿನಾಡು ಜರ್ಮನಿಯ ಸರ್ಕಾರ ಮತ್ತು ಜರ್ಮನಿಯಲ್ಲಿರುವ ಅವರ ಫ್ಯಾಮಿಲಿಯವರು ಎಲ್ಲರೂ ಸೇರಿಕೊಂಡು ಇದು ರುಡಿನೇ ಅನ್ನೋ ಕನ್ಕ್ಲುಶನ್ ಗೆ ಬಂದಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply