ದಸರಾ ಉದ್ಘಾಟನೆ ವೇಳೆ ಭೈರಪ್ಪಗೆ ಅವಮಾನ..!

ದಸರಾ ಉದ್ಘಾಟನೆಗೆ ಆಗಮಿಸಿದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ ತೋರಿಸಲಾಗಿದೆ. ದಸರಾ ಉದ್ಘಾಟನೆ ಮಾಡುವವರನ್ನು ಮಹಿಷಾ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಕರೆತರೋದು ಸಂಪ್ರದಾಯ. ಅದೇ ರೀತಿ ಇವತ್ತು ಎಸ್.ಎಲ್ ಭೈರಪ್ಪ ಅವರನ್ನೂ ಕೂಡ ಮೆರವಣಿಗೆ ಮೂಲಕ ಕರೆತರಬೇಕಿತ್ತು. ಹೀಗಾಗಿಯೇ ಮೊದಲೇ ಆಗಮಿಸಿದ್ದ ಭೈರಪ್ಪ ಮಹಿಷ ಪ್ರತಿಮೆ ಬಳಿ 30 ನಿಮಿಷಗಳ ಕಾಲ ಕಾರಿನಲ್ಲೇ ಕಾದು ಕುಳಿತಿದ್ದರು. ಆದ್ರೆ ತಡವಾಗಿ ಬಂದ ಯಡಿಯೂರಪ್ಪ ಮತ್ತು ಸಚಿವರು ಭೈರಪ್ಪ ಅವರನ್ನು ಮರೆತೇ ಬಿಟ್ಟರು. ಹೀಗಾಗಿ ಯಡಿಯೂರಪ್ಪ, ಸಚಿವರೆಲ್ಲಾ ಬಂದ ಬಳಿಕ ಬೇಸರದಲ್ಲಿ ಭೈರಪ್ಪ ಒಬ್ಬರೇ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ರು.

Contact Us for Advertisement

Leave a Reply