ರಾಜಕಾರಣಿಗಳು, ವಿಚಾರವಾದಿಗಳ ವಿರುದ್ಧ ಎಸ್.ಎಲ್.ಭೈರಪ್ಪ ಕೆಂಡ

ದೇವರಿರೋದೇ ಸುಳ್ಳು ಅನ್ನೋ ರೀತಿ ಮಾತನಾಡೋ ನಾಸ್ತಿಕರು ಮತ್ತು ವಿಚಾರವಾದಿಗಳಿಗೆ ಎಸ್.ಎಲ್.ಭೈರಪ್ಪ ತಿರುಗೇಟು ಕೊಟ್ಟಿದ್ದಾರೆ. ಮೈಸೂರು ದಸರಾ 2019 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ದೇವರನ್ನು ನಂಬುತ್ತೇನೆ. ಈ ಬಾರಿ ತಮ್ಮ ಮೊಮ್ಮಕ್ಕಳನ್ನೂ ದೇವರ ದರ್ಶನಕ್ಕೆ ಕರೆದುಕೊಂಡು ಬರ್ತೀನಿ ಅಂದ್ರು. ಅಲ್ಲದೆ ಸಾಹಿತಿಗಳು, ವಿಚಾರವಂತರು, ಪ್ರಗತಿಪರರು ದೇವರನ್ನೇ ನಂಬಲ್ಲ ಅನ್ನೋ ಭಾವನೆ ಪ್ರಗತಿಪರರಲ್ಲಿದೆ. ಅಲ್ಲದೆ ಸಾಹಿತಿಗಳು ಪೂಜೆಯನ್ನೂ ಮಾಡ್ತಾರೆ, ಮಂಗಳಾರತಿ ತೆಗೆದುಕೊಳ್ತಾರೆ ಅಂದ್ರು. ಇನ್ನು ಸಾಹಿತಿಗಳು ದೇವರನ್ನು ನಂಬೋದಿಲ್ಲ ಅನ್ನೋ ಅಭಿಪ್ರಾಯ ಜನರಲ್ಲಿದೆ. ಆದ್ರೆ ನಾನು ಆ ರೀತಿ ದೇವರನ್ನು ನಂಬದಿರೋ ಸಾಹಿತಿಯಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ವಾರಕ್ಕೊಮ್ಮೆಯಾದರೂ ಚಾಮುಂಡಿ ಬೆಟ್ಟ ಹತ್ತಿ ದೇವರ ದರ್ಶನ ಪಡೆಯುತ್ತಿದ್ದೆ ಎಂದು ಹೇಳಿದ್ರು.

ಇನ್ನು ಇದೇ ವೇಳೆ ಮಹಿಳೆಯರ ಬಗ್ಗೆ ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆಯರನ್ನು ತುಳಿಯಲಾಗುತ್ತಿದೆ ಎಂಬ ತಪ್ಪು ಗ್ರಹಿಕೆ ಇದೆ. ಆದ್ರೆ ಸಮಾಜದಲ್ಲಿ ಶೇ.50ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿದ್ದಾರೆ. ಆದ್ರೆ ಧಾರ್ಮಿಕ ನಂಬಿಕೆಯೇ ಬೇರೆ. ಅದರಲ್ಲಿ ಸರ್ಕಾರ ಮಧ್ಯಪ್ರವೇಶಿಸಬಾರದು. ಕೇರಳದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಹಿಂದೆ ಕಮ್ಯೂನಿಸ್ಟ್ ಸರ್ಕಾರದ ಕೈವಾಡವಿದೆ ಅಂದ್ರು. ಅಲ್ಲದೆ ಕೃಷಿ ಹಾಳಾಗಲು ರಾಜಕಾರಣಿಗಳೇ ಕಾರಣ ಎಂದು ಕೆಂಡಕಾರಿದ್ರು.

Contact Us for Advertisement

Leave a Reply