ಲಸಿಕೆ ಹಾಕಿಸಿಕೊಂಡ್ರೆ ರಂಜಾನ್‌ ಉಪಾವಸಕ್ಕೆ ಧಕ್ಕೆ ಇಲ್ಲ

masthmagaa.com:

ಮುಂದಿನ ತಿಂಗಳು 12 ಅಥವಾ 13ರಂದು ಚಂದ್ರನನ್ನು ನೋಡಿದ ಬಳಿಕ ರಮ್​ಜಾನ್ ಉಪವಾಸ ಶುರುವಾಗಲಿದೆ. ಇದ್ರಿಂದ ಜಗತ್ತಿನ ಮುಸ್ಲಿಂ ಸಮುದಾಯಕ್ಕೆ ಒಂದು ಗೊಂದಲ ಎದುರಾಗಿತ್ತು. ಅದೇನಂದ್ರೆ ಉಪವಾಸದ ವೇಳೆ ಕೊರೋನಾ ಲಸಿಕೆ ಹಾಕಿಸಿಕೊಳ್ಳಬಹುದಾ..? ಹೀಗೆ ಮಾಡಿದ್ರೆ ಉಪವಾಸ ಹಾಳಾಗಲ್ವಾ ಅಂತ ಚರ್ಚೆ ಜೋರಾಗಿತ್ತು.

ಆದ್ರೀಗ ಸೌದಿ ಅರೇಬಿಯಾದ ಗ್ರ್ಯಾಂಡ್ ಮುಫ್ತಿ ಈ ಬಗ್ಗೆ ಮಾತಾಡಿದ್ದಾರೆ, ಲಸಿಕೆ ಹಾಕಿಸಿಕೊಳ್ಳುವುದರಿಂದ ಉಪವಾಸಕ್ಕೆ ಯಾವುದೇ ಅಡ್ಡಿಯಿಲ್ಲ.. ಉಪವಾಸ ಬ್ರೇಕ್ ಮಾಡಿದಂತೆ ಆಗೋದಿಲ್ಲ ಅಂತ ತಿಳಿಸಿದ್ದಾರೆ. ಊಟ, ನೀರು ಬಿಟ್ಟು ಉಪವಾಸ ಮಾಡಲಾಗುತ್ತೆ. ಆದ್ರೆ ಕೊರೋನಾ ಲಸಿಕೆ ಆಹಾರವೂ ಅಲ್ಲ. ನೀರು ಅಥವಾ ದ್ರವೀಯ ಆಹಾರವೂ ಅಲ್ಲ.. ಇದನ್ನು ನೇರವಾಗಿ ಶರೀರಕ್ಕೆ ನೀಡಲಾಗುತ್ತೆ. ಹೀಗಾಗಿ ಇದ್ರಿಂದ ಉಪವಾಸಕ್ಕೆ ಭಂಗ ಆಗೋದಿಲ್ಲ ಅಂತ ಗ್ರ್ಯಾಂಡ್ ಮುಫ್ತಿ ಶೇಖ್ ಅಬ್ದುಲ್ಲಾ ಅಜೀಜ್ ಅಲ್ ಅಶೇಖ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply