ರಾಯಬರೇಲಿಯಿಂದ ರಾಹುಲ್‌ ಕಣಕ್ಕೆ: ಹೆದರಿ ಓಡಬೇಡಿ ಅಂದ ಮೋದಿ!

masthmagaa.com:

ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳು ಅಂತ ಕರೆಸಿಕೊಂಡಿರೊ ಅಮೇಠಿ ಹಾಗೂ ರಾಯಬರೇಲಿಗಳಿಗೆ ಕಾಂಗ್ರೆಸ್‌ ಕೊನೆ ಘಳಿಗೆಯಲ್ಲಿ ತನ್ನ ಅಭ್ಯರ್ಥಿಗಳ ಹೆಸರನ್ನ ಫೈನಲ್‌ ಮಾಡಿದೆ. ಅಮೇಠಿ ಬಿಟ್ಟು ಕಾಂಗ್ರೆಸ್‌ನ ಭದ್ರಕೋಟೆ, ಸೋನಿಯಾ ಗಾಂಧಿ ಪ್ರತಿನಿಧಿಸಿದ ರಾಯಬರೇಲಿ ಕ್ಷೇತ್ರದಿಂದ ರಾಹುಲ್‌ ಕಣಕ್ಕಿಳಿದಿದ್ದಾರೆ. ರಾಹುಲ್‌ ನಾಮಪತ್ರ ಸಲ್ಲಿಸೊ ವೇಳೆ ಸೋನಿಯಾ ಗಾಂಧಿ, ಪ್ರಿಯಂಕಾ ಗಾಂಧಿ ವಾದ್ರಾ ಕೂಡ ಹಾಜರಿದ್ರು. ಇನ್ನು ಕಳೆದ ಬಾರಿ ರಾಹುಲ್ ಸೋಲನುಭವಿಸಿದ್ದ ಅಮೇಠಿಯಲ್ಲಿ ಈ ಬಾರಿ KL ಶರ್ಮಾ ಅನ್ನೊ ಗಾಂಧಿ ಕುಟುಂಬ ನಿಷ್ಠರಿಗೆ ಕೈ ಟಿಕೆಟ್‌ ನೀಡಿದ್ದು. ಅವ್ರು ಕೂಡ ನಾಮಿನೇಷನ್‌ ಫೈಲ್‌ ಮಾಡಿದ್ದಾರೆ.

ಇನ್ನು ಈ ಬಾರಿ ಅಮೇಠಿ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದಿರೊ ರಾಹುಲ್‌ ಗಾಂಧಿ ವಿರುದ್ದ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ. ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ʻಡರೋ ಮತ್‌, ಭಾಗೊ ಮತ್‌ ಅಂದ್ರೆ ಹೆದರಬೇಡಿ, ಓಡಬೇಡಿʼ ಅಂತ ರಾಹುಲ್‌ ಕಾಲೆಳೆದಿದ್ದಾರೆ. ʻನಾನು ಮೊದ್ಲೆ ಹೇಳಿದ್ದೆ ವೈನಾಡಿನಲ್ಲಿ ಸೋಲಿನ ಭಯದಿಂದ ಈ ಪ್ರಿನ್ಸ್‌ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ ಅಂತ. ಈಗ ಹಾಗೇ ಆಗಿದೆʼ ಅಂತೇಳಿ ಅಣಕಿಸಿದ್ದಾರೆ. ಇನ್ನು ರಾಹುಲ್‌ ಸ್ಪರ್ಧೆ ವಿಚಾರವಾಗಿ, ಕೇಂದ್ರ ಸಚಿವೆ, ಅಮೇಠಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದಾರೆ. ʻಚುನಾವಣೆ ಮೊದ್ಲೆ ಕಾಂಗ್ರೆಸ್‌ ಸೋಲೊಪ್ಪಿಕೊಂಡಿದೆ. ಅಮೇಠಿಯಿಂದ ರಾಹುಲ್‌ ಗೆಲ್ಲೋ ವಿಶ್ವಾಸದಲ್ಲಿದ್ರೆ, ಅವ್ರು ಪ್ರಾಕ್ಸಿ ಅಭ್ಯರ್ಥಿಯನ್ನ ಹಾಕ್ತಿರಲಿಲ್ಲʼ ಅಂತೇಳಿ ರಾಹುಲ್‌ಗೆ ಟಾಂಗ್‌ ಕೊಟ್ಟಿದ್ದಾರೆ. ಇನ್ನು ರಾಹುಲ್‌ ಸ್ಪರ್ಧೆ ವಿಚಾರವಾಗಿ ಕಾಂಗ್ರೆಸ್‌ನ ಹಿರಿಯ ಜೈರಾಮ್‌ ನಾಯಕ ಸಮರ್ಥನೆ ನೀಡಿದ್ದಾರೆ. ʻರಾಹುಲ್‌ ರಾಜಕೀಯ ಮತ್ತು ಚೆಸ್‌ನಲ್ಲಿ ಅನುಭವಿ ಆಟಗಾರರಾಗಿದ್ದಾರೆ. ಹೀಗಾಗಿ ಪಕ್ಷದ ತೀರ್ಮಾನದಂತೆ ಅವ್ರು ರಾಯಬರೇಲಿಯಿಂದ ಸ್ಪರ್ಧೆ ಮಾಡ್ತಿದ್ದಾರೆʼ ಅಂತೇಳಿದ್ದಾರೆ. ಇನ್ನು ನಾಮಪತ್ರ ಸಲ್ಲಿಸಿರೋ ವೇಳೆ ಮಾತಾಡಿರೋ ರಾಹುಲ್‌, ʻನನ್ನ ಅಮ್ಮ ಸೋನಿಯಾ ಗಾಂಧಿ ತನ್ನ ಕ್ಷೇತ್ರದಲ್ಲಿ ನನಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಇದು ಪ್ರಜಾ ಪ್ರಭುತ್ವಕ್ಕಾಗಿ ನಡೆಸ್ತಿರೊ ಹೋರಾಟ ಅಂತೇಳಿ ರಾಯಬರೇಲಿ ಸ್ಪರ್ಧೆ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

ಇನ್ನು ಮಾಧ್ಯಮ ಒಂದ್ರಲ್ಲಿ ರಾಹುಲ್‌ ಹೆದರಿಕೊಂಡು ಸ್ಪರ್ಧೆ ಮಾಡಲಿಲ್ವಾ ಅಂತ ಕೇಳಿದ್ದಕ್ಕೆ, ರಾಜ್ಯ ಸಭೆ ವಿಪಕ್ಷ ಉಪನಾಯಕ ಕಾಂಗ್ರೆಸ್‌ನ ಹಾಲಿ ಸಂಸದ ಪ್ರಮೋದ್‌ ತಿವಾರಿ , ಸ್ಮೃತಿ ಇರಾನಿ ಅವ್ರನ್ನ ಕಂಡ್ರೆ ರಾಹುಲ್‌ ಗಾಂಧಿ ಅವ್ರಿಗೆ ಅಷ್ಟೇ ಅಲ್ಲ, ಎಲ್ಲ ಗಂಡರಿಸಿಗೂ ಹೆದರಿಕೆ ಆಗುತ್ತೆ ಅಂತೇಳಿ ಸ್ವಪಕ್ಷದವರನ್ನೆ ಮುಜುಗರಕ್ಕೀಡು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply