ಅಮೆರಿಕದಲ್ಲಿ ಹಿಮ ಬಿರುಗಾಳಿ: ಸಂಕಷ್ಟದಲ್ಲಿ ಜನ

masthmagaa.com:

ಕೊರೋನಾ, ಕಾಡ್ಗಿಚ್ಚಿನ ಬಳಿಕ ಹಿಮ ಬಿರುಗಾಳಿ ಅಮೆರಿಕವನ್ನು ಹಿಂಡಿ ಹಿಪ್ಪೆ ಮಾಡ್ತಿದೆ. ಕೆಲ ಭಾಗಗಳಲ್ಲಂತೂ ಅಘೋಷಿತ ಲಾಕ್​ಡೌನ್ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕದ ವಿವಿಧ ರಾಜ್ಯಗಳಲ್ಲಿ ಸುರಿಯುತ್ತಿರುವ ಮಂಜು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಜನ ಮನೆಗಳಿಂದ ಹೊರಹೋಗೋದು ಕೂಡ ಕಷ್ಟವಾಗಿದೆ. ಹಲವು ರಾಜ್ಯಗಳಲ್ಲಿ ಶಾಲೆ ಮತ್ತು ಸರ್ಕಾರಿ ಕಚೇರಿಗಳು ಕೂಡ ಬಂದ್ ಆಗಿವೆ. ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಹಲವು ನಗರಗಳಲ್ಲಿ ವಿದ್ಯುತ್ ಪೂರೈಕೆ ಕೂಡ ಅಸ್ತವ್ಯವಸ್ತಗೊಂಡಿದೆ. ಮಧ್ಯ ಅಟ್ಲಾಂಟಿಕ್ ಪ್ರದೇಶದಲ್ಲಿ 4ರಿಂದ 8 ಇಂಚುಗಳ ವರೆಗೆ ಹಿಮ ಕೂರುತ್ತಿದೆ. ರಸ್ತೆಗಳುದ್ದಕ್ಕೂ ಹಿಮ ಸಂಗ್ರಹವಾಗಿದ್ದು, ವಾಹನ ಸಂಚಾರ ಕೂಡ ಕಷ್ಟವಾಗ್ತಿದೆ.

-masthmagaa.com:

 

Contact Us for Advertisement

Leave a Reply