ಪಾಕಿಸ್ತಾನದಲ್ಲಿ ಹಿಮ ಹಾವಳಿ! 23 ಮಂದಿ ಬಲಿ

masthmagaa.com:

ಪಾಕಿಸ್ತಾನದ ಪ್ರವಾಸಿ ಪ್ರಸಿದ್ಧ ಸ್ಥಳವಾದ ಮರ್ರಿಯನ್ನು ವಿಪತ್ತು ಪೀಡಿತ ಪ್ರದೇಶ ಅಂತ ಘೋಷಿಸಲಾಗಿದೆ. ಪಂಜಾಬ್ ಪ್ರಾಂತ್ಯದಲ್ಲಿರೋ ಈ ಪ್ರದೇಶದಲ್ಲಿ ಜೋರಾಗಿ ಮಂಜು ಸುರಿಯುತ್ತಿದ್ದು, ಪ್ರವಾಸಿಗರು ಬರೋ ಸಂಖ್ಯೆ ಕೂಡ ಜಾಸ್ತಿಯಾಗಿತ್ತು. ಆದ್ರೆ ಶನಿವಾರ ಹಿಮದ ನಡುಗೆ ಕಾರುಗಳಲ್ಲಿ ಸಿಲುಕಿ 10 ಮಂದಿ ಮಕ್ಕಳು ಸೇರಿದಂತೆ 23 ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಮರ್ರೀಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ವಾಹನಗಳು ಫುಲ್ ಸ್ಟ್ರಕ್ ಆಗೋಗಿದ್ವು. ಹಿಲ್ ಸ್ಟೇಷನ್​​ನಲ್ಲೇ ಸಾವಿರಕ್ಕೂ ಹೆಚ್ಚು ವಾಹನಗಳು ಜಾಮ್ ಆಗಿದ್ವು. ರಾಜ್ಯಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, 1122 ಮಂದಿಯನ್ನು ರಕ್ಷಿಸಿದೆ. ಆದ್ರೆ ಊಟ ಇಲ್ಲದೆ, ನೀರಿಲ್ಲದೆ, ಆಕ್ಸಿಜನ್ ಇಲ್ಲದೇ 23 ಮಂದಿ ಫ್ರೋಜ್ ಆಗಿ ಪ್ರಾಣ ಬಿಟ್ಟಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ, ತುಂಬಾ ಜನ ಪ್ರವಾಸಕ್ಕೆ ಬರ್ತಿದ್ದಾರೆ. ಕಂಟ್ರೋಲ್ ಮಾಡಕ್ಕೆ ಆಗ್ತಿಲ್ಲ. ಜನ ಕಾಮನ್​ಸೆನ್ಸ್ ಯೂಸ್ ಮಾಡ್ಬೇಕು. ಇಷ್ಟು ಖರ್ಚು ಮಾಡಿ ಇಲ್ಲಿಗೆ ಬರೋ ಬದಲು.. ಮನೆಯಲ್ಲೇ ಕುಳಿತು ಸ್ನೋ ಸ್ಪ್ರೇ ತಗೊಂಡು ಒಬ್ಬರ ಮೇಲೊಬ್ಬರು ಹಾರಿಸಿಕೊಂಡು, ಆನಂದಿಸಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply