ಕೊಲ್ಲುತಿದೆ ಒಮೈಕ್ರಾನ್! WHO ಸ್ಫೋಟಕ ಮಾಹಿತಿ

masthmagaa.com:

ಇಷ್ಟು ದಿನ ಒಮೈಕ್ರಾನ್ ಅಷ್ಟೇನೂ ಡೇಂಜರ್ ಅಲ್ಲ.. ಮೈಲ್ಡ್ ಆಗಿ ಬರುತ್ತಷ್ಟೆ ಅಂತ ಹೇಳ್ಕೊಂಡು ಬಂದಿದ್ದ ವಿಶ್ವ ಆರೋಗ್ಯ ಸಂಸ್ಥೆ ಇವತ್ತು ಶಾಕಿಂಗ್ ಮಾಹಿತಿ ನೀಡಿದೆ. ಇಡೀ ವಿಶ್ವದಲ್ಲಿ ಒಮೈಕ್ರಾನ್​​
ತುಂಬಾ ವೇಗವಾಗಿ ಹರಡುತ್ತಿದೆ. ಆಸ್ಪತ್ರೆಗೆ ದಾಖಲಾಗ್ತಿರೋರ ಸಂಖ್ಯೆ ಜಾಸ್ತಿಯಾಗ್ತಿದ್ದು, ಜನರನ್ನು ಕೊಲ್ಲುತ್ತಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಹೇಳಿದ್ದಾರೆ. ಇನ್ನು ಡೆಲ್ಟಾಗೆ ಹೋಲಿಸಿದ್ರೆ ವ್ಯಾಕ್ಸಿನ್ ಹಾಕಿಸಿಕೊಂಡವರ ಮೇಲೆ ಒಮೈಕ್ರಾನ್ ಕಡಿಮೆ ಪರಿಣಾಮಕಾರಿಯಾಗಿರಬಹುದು. ಹಾಗಂದ ಮಾತ್ರಕ್ಕೆ ಅದನ್ನು ಮೈಲ್ಡ್​ ಕೆಟಗರಿಗೆ ಸೇರಿಸೋದು ಸರಿಯಲ್ಲ. ಒಮೈಕ್ರಾನ್ ತುಂಬಾ ಮೈಲ್ಡ್​ ಅಂತ ಪರಿಗಣಿಸೋದೇ ತಪ್ಪು.. ಈ ಹಿಂದೆ ಬಂದ ಬೇರೆ ವೇರಿಯಂಟ್​​​ಗಳಂತೆ ಇದು ಕೂಡ ಜನ ಆಸ್ಪತ್ರೆಗೆ ದಾಖಲಾಗುವಂತೆ ಮಾಡ್ತಿದೆ. ಕೊಲ್ಲುತ್ತಿದೆ ಅಂತ ಟೆಡ್ರೋಸ್​​ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ.. ಒಮೈಕ್ರಾನ್​​ನಿಂದಾಗಿ ಸುನಾಮಿ ರೀತಿ ಹೊಸ ಪ್ರಕರಣಗಳು ಪತ್ತೆಯಾಗ್ತಿವೆ. ಇಡೀ ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರದ ಮೇಲಿನ ಒತ್ತಡ ಹೆಚ್ಚುವಂತೆ ಮಾಡಿದೆ. ಕಳೆದೊಂದು ವಾರದಲ್ಲಿ ಇಡೀ ವಿಶ್ವದಲ್ಲಿ 95 ಲಕ್ಷ ಮಂದಿಗೆ ಕೊರೋನಾ ಬಂದಿದೆ. ಕಳೆದ ವಾರಕ್ಕೆ ಹೋಲಿಸಿದ್ರೆ 71 ಪರ್ಸೆಂಟ್ ಜಾಸ್ತಿಯಾಗಿದೆ ಅಂತ ಕೂಡ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply