ವಿಜಯೇಂದ್ರ ಮುಖ್ಯಮಂತ್ರಿ ಆದ್ರೆ ತಪ್ಪೇನು: ಸಚಿವ ಮುರಗೇಶ್‌ ನಿರಾಣಿ

masthmagaa.com:

ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಮತ್ತೆ ಪೈಪೋಟಿ ಏರ್ಪಡುವ ಸಾಧ್ಯತೆಗಳು ಸಣ್ಣದಾಗಿ ಶುರುವಾಗ್ತಿವೆ. ವಿಧಾನ ಪರಿಷತ್‌ ಸದಸ್ಯ ಸ್ಥಾನ ಕೈತಪ್ಪಿದ್ದಕ್ಕೆ ಅತೃಪ್ತಗೊಂಡಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿಗರು ಮೈಸೂರಿನಲ್ಲಿ ವಸತಿ ಸಚಿವ ವಿ.ಸೋಮಣ್ಣ ಭಾಷಣ ಮಾಡುವ ವೇಳೆ ಜೋರಾಗಿ ಜೈಕಾರ ಘೋಷಣೆ ಮೊಳಗಿಸಿದ್ದಾರೆ. ವಿಜಯೇಂದ್ರ ನಮ್ಮ ಮುಂದಿನ ಸಿಎಂ ಅಂತ ಕೂಗಿದ್ದಾರೆ. ಇದ್ರಿಂದ ವಿ.ಸೋಮಣ್ಣನವರಿಗೆ ಕೆಲಕಾಲ ಮುಜುಗರ ಉಂಟಾಗಿದೆ. ಇನ್ನು ಇದ್ರ ಬೆನ್ನಲ್ಲೇ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ಮುರುಗೇಶ್‌ ನಿರಾಣಿ, ಬಿಜೆಪಿಯಲ್ಲಿ ಮತ್ತು ಲಿಂಗಾಯತ ಧರ್ಮದಲ್ಲಿ ಬಿ.ಎಸ್‌.ಯಡಿಯೂರಪ್ಪನವ್ರು ನಮ್ಮ ಪ್ರಮುಖ ನಾಯಕರು. ರಾಜ್ಯದಲ್ಲಿ ನಾಲ್ಕು ಬಾರಿ ಸಿಎಂ ಆಗಿದ್ದವ್ರು. ಅವ್ರ ಮಗ ವಿಜಯೇಂದ್ರ ಮುಖ್ಯಮಂತ್ರಿಯಾದ್ರೆ ತಪ್ಪೇನಿದೆ ಅಂತ ಕೇಳಿದ್ದಾರೆ. ಈ ಮೂಲಕ ವಿಜಯೇಂದ್ರ ಅವ್ರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟು ಸ್ಪರ್ಧಿಸಲು ಅವಕಾಶ ನೀಡ್ಬೇಕು ಅಂತ ಅವ್ರ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಅಂದ್ಹಾಗೆ ಈ ಹಿಂದೆ ಸ್ವತಃ ನಿರಾಣಿ ಅವ್ರೇ ಸಿಎಂ ಕುರ್ಚಿ ಮೇಲೆ ಟವೆಲ್‌ ಹಾಕಿದ್ರು. ದಿಲ್ಲಿ, ಗುಜರಾತ್‌ ಅಂತ ಸಾಕಷ್ಟು ಓಡಾಡಿದ್ರು. ಆದ್ರೆ ಅದ್ಯಾವದೂ ಫಲ ಕೊಡದೇ, ಹೈಕಮಾಂಡ್‌ ಬಸವರಾಜ್‌ ಬೊಮ್ಮಾಯಿ ಅವ್ರಿಗೆ ಅಸ್ತು ಅಂದಿತ್ತು. ಆದ್ರೆ ಈಗ ಸಡನ್‌ ಆಗಿ ಈಗ ವಿಜಯೇಂದ್ರ ಪರ ಮಾತಾಡ್ತಾ ಇರೋದು ನೋಡಿದ್ರೆ ಅದೇ ಮುನಿಸು ಇನ್ನೂ ಇದ್ಯಾ ಅಂತ ಶಂಕೆ ವ್ಯಕ್ತವಾಗ್ತಾ ಇದೆ.

-masthmagaa.com

Contact Us for Advertisement

Leave a Reply