ಬೆಂಗಳೂರು ಏರ್​ಪೋರ್ಟ್​​ನಲ್ಲಿ ಗಂಗೂಲಿ ಸೆಲ್ಫಿ..ಅಭಿಮಾನಿಗಳಿಗೆ ಹೇಳಿದ್ದೇನು..?

ಬೆಂಗಳೂರು: ಬಿಸಿಸಿಐ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರೋ ಸೌರವ್ ಗಂಗೂಲಿ ಈಗ ಭಾರಿ ಸುದ್ದಿಯಲ್ಲಿದ್ದಾರೆ. ಇದ್ರ ನಡುವೆ ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಏರ್​ಪೋರ್ಟ್​​​ನಲ್ಲಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಟ್ವಿಟ್ಟರ್​ನಲ್ಲಿ ಹಾಕಿಕೊಂಡಿರೋ ಅವರು, ಬೆಂಗಳೂರು ಏರ್​ಪೋರ್ಟ್​​ನಲ್ಲಿ ಚೆಕ್​ಇನ್ ಆಗುವಾಗ ಜನರು ತೋರಿಸಿದ ಪ್ರೀತಿ, ಹೆಮ್ಮೆಪಡುವಂತೆ ಮಾಡಿತು  ಎಂದು ಬರೆದಿದ್ದಾರೆ. ಈ ಫೋಟೋದಲ್ಲಿ ಕೆಲ ಅಭಿಮಾನಿಗಳು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ಇದ್ದಾರೆ.

ಇತ್ತೀಚೆಗೆ ಮಾಜಿ ಸಹ ಆಟಗಾರ ಮತ್ತು ನ್ಯಾಷನಲ್ ಕ್ರಿಕೆಟ್​ ಅಕಾಡೆಮಿಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಸೌರವ್ ಗಂಗೂಲಿ ಬೆಂಗಳೂರಿಗೆ ಬಂದಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೇಟಿಯಾದ ಸೌರವ್ ಮತ್ತು ದ್ರಾವಿಡ್ ಮಹತ್ವದ ಚರ್ಚೆ ನಡೆಸಿದ್ರು.

Contact Us for Advertisement

Leave a Reply