masthmagaa.com:

ಕೊರೋನಾ ಹಾವಳಿ ನಡುವೆಯೇ ಕೆಲವೊಂದು ದೇಶಗಳ ನಡುವೆ ಕ್ರಿಕೆಟ್​ ಸರಣಿ ನಡೆಯುತ್ತಿದೆ. ಆದ್ರೀಗ ಕ್ರಿಕೆಟ್​ಗೂ ಕೊರೋನಾ ಕಾಟ ಶುರುವಾಗಿದೆ. ದಕ್ಷಿಣ ಆಫ್ರಿಕಾ ತಂಡದ ಆಟಗಾರನೊಬ್ಬನಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆ ಇಂದು ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯವನ್ನ ಕೊನೇ ಕ್ಷಣದಲ್ಲಿ ಮುಂದೂಡಲಾಗಿದೆ. ಈ ವಿಚಾರವನ್ನ ಐಸಿಸಿ ತಿಳಿಸಿದೆ.

ಎರಡೂ ತಂಡದ ಆಟಗಾರರಿಗೆ ಗುರುವಾರ ಕೊನೇ ಸುತ್ತಿನ ಕೊರೋನಾ ಪರೀಕ್ಷೆ ನಡೆಸಿದಾಗ ದಕ್ಷಿಣ ಆಫ್ರಿಕಾ ತಂಡದ ಆಟಗಾರನೊಬ್ಬನಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಆಟಗಾರರ ಆರೋಗ್ಯದ ದೃಷ್ಟಿಯಿಂದ ಮೊದಲ ಪಂದ್ಯವನ್ನ ಭಾನುವಾರಕ್ಕೆ ಪೋಸ್ಟ್​ಪೋನ್ ಮಾಡಲಾಗಿದೆ. ಯಾವ ಆಟಗಾರನಿಗೆ ಕೊರೋನಾ ದೃಢಪಟ್ಟಿದೆ ಅನ್ನೋದು ಬಹಿರಂಗಪಡಿಸಿಲ್ಲ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಒಟ್ಟು 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

-masthmagaa.com

Contact Us for Advertisement

Leave a Reply