ಊಸರವಳ್ಳಿಯಂತೆ ಬಣ್ಣ ಬದಲಿಸೋ ಕೃತಕ ಚರ್ಮ ಅನ್ವೇಷಣೆ!

masthmagaa.com:

ದಕ್ಷಿಣ ಕೊರಿಯಾದ ವಿಜ್ಞಾನಿಗಳು ಊಸರವಳ್ಳಿಯಂತೆ ಬಣ್ಣ ಬದಲಾಯಿಸೋ ಕೃತಕ ಚರ್ಮ ಕಂಡುಹಿಡಿದಿದ್ದೀವಿ ಅಂತ ಹೇಳಿದ್ದಾರೆ. ಈ ಚರ್ಮ ತನ್ನ ಅಕ್ಕಪಕ್ಕದ ವಾತಾವರಣದ ಕಲರ್ ಗೆ ತಕ್ಕಂತೆ ಕೂಡಲೇ ತನ್ನ ಕಲರ್ ಅನ್ನೂ ಬದಲಾಯಿಸಿಕೊಳ್ಳುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇದನ್ನ ತೋರಿಸೋ ಒಂದು ಫೋಟೋವನ್ನೂ ಬಿಡುಗಡೆ ಮಾಡಿದ್ದಾರೆ. ಏನಕ್ಕೆ ಇದು? ಇದರಿಂದ ಏನ್ ಲಾಭ.? ಬಹುಶಃ ಸೇನೆಗಳಲ್ಲಿ ಬಳಸೋ ಕ್ಯಾಮೋಫ್ಲಾಜ್ ಟೆಕ್ನಿಕ್ಗೆ ಇದು ಹೆಲ್ಪ್ ಆಗಬೋದು. ಯಾವುದೇ ದೇಶದ ಸೇನೆ ನೋಡಿ… ಅವರು ಯುದ್ಧ ಮಾಡೋ ಪ್ರದೇಶಕ್ಕೆ ತಕ್ಕಂತೆ ಡಿಸೈನ್ ಮಾಡಲಾಗಿರುತ್ತೆ. ಅದರಲ್ಲೂ ವಿಶೇಷವಾಗಿ ನಿರ್ದಿಷ್ಟ ವಾತಾವರಣದಲ್ಲಿ ಕೆಸಲ ಮಾಡೋ ಯುನಿಟ್​​​​ಗಳಿಗೆ ಅದಕ್ಕೆ ತಕ್ಕಂತೆ ಯೂನಿಫಾರ್ಮ್ ಬಣ್ಣ ಇರುತ್ತೆ. ಹಿಮದಲ್ಲಿ ಕೆಲಸ ಮಾಡೋ ಸೈನಿಕರ ಯೂನಿಫಾರ್ಮ್ ಬಿಳಿ ಇರುತ್ತೆ, ಕಾಡಲ್ಲಿ ಕೆಲಸ ಮಾಡೋ ಸೈನಿಕರಿಗೆ ಹಸಿರು ಎಲೆ ತರ ಡಿಸೈನ್, ಮರುಭೂಮಿಯಲ್ಲಿ ಕೆಲಸ ಮಾಡೋರಿಗೆ ಮಣ್ಣಿನ ಬಣ್ಣದ್ದು., ಈ ಥರ ಪ್ಲಾನ್ ಮಾಡಿರ್ತಾರೆ. ಉದ್ದೇಶ? ಕೂಡಲೇ ಶತ್ರುಗಳ ಕಣ್ಣಿಗೆ ಕಾಣದಂತೆ ಮಾಡೋದು. ಈಗ ದಕ್ಷಿಣ ಕೊರಿಯಾ ವಿಜ್ಞಾನಿಗಳು ಕಂಡು ಹಿಡಿದಿರೋ ಈ ಕೃತಕ ಊಸರವಳ್ಳಿಯಂತ ಚರ್ಮ ಈ ವಿಚಾರದಲ್ಲಿ ಕ್ರಾಂತಿಕಾರಿ ಆಗಬೋದು. ಇದ್ದಕ್ಕಿದ್ದ ಹಾಗೆ ಬೇರೆ ಬಣ್ಣದ ಪ್ರದೇಶದಲ್ಲಿ ಕಾಣಿಸಿಕೊಳ್ಳಬೇಕಾಗಿ ಬಂದರೂ ಚಿಂತೆಯಿಲ್ಲದೆ ಸೈನಿಕರು ಮೂವ್ ಆಗೋಕೆ ಸಾಧ್ಯ ಆಗಬೋದು. ಆದ್ರೆ ಇಲ್ಲಿ ಕಲರ್ ಡಿಟೆಕ್ಷನ್ ಸೆನ್ಸಾರ್ ಸೇರಿದಂತೆ ಅನೇಕ ಆಧುನಿಕ ಟೆಕ್ನಾಲಜಿ ಬಳಕೆ ಆಗುತ್ತೆ. ಇದೆಲ್ಲ ಕಾಸ್ಟ್ಲಿ. ಇದನ್ನ ಅಷ್ಟೆಲ್ಲ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ಸೇನೆಗೆ ಕೊಡಕ್ಕಾಗುತ್ತಾ ಅನ್ನೋದು ಪ್ರಶ್ನೆ. ಆದ್ರೂನೂ ಕೆಲವೇ ಕೆಲವು ರೆಡಿ ಮಾಡಿ ಇಟ್ಕೊಂಡು ಅಪರೂಪದ ಸೀಕ್ರೆಟ್ ಆಪರೇಶನ್ ಗಳಿಗೆ ಬಳಸೋ ಪ್ರಯತ್ನ ನಡೆದರೂ ನಡೆಯಬಹುದು.

-masthmagaa.com

Contact Us for Advertisement

Leave a Reply