ನಾರ್ಥ್ ಕೊರಿಯಾ ಜೊತೆ ಮಾತುಕತೆಗೆ ಸಿದ್ಧವಾದ ದಕ್ಷಿಣ ಕೊರಿಯಾ!

masthmagaa.com:

ನಾರ್ಥ್ ಕೊರಿಯಾ ಒಪ್ಪಿದ್ರೆ ಮಾತುಕತೆಗೆ ಸಿದ್ಧ ಅಂತ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಾಯ್ ಇನ್ ಹೇಳಿದ್ದಾರೆ. ತಾವು ಉತ್ತರ ಕೊರಿಯಾದ ಪ್ರತಿಕ್ರಿಯೆಗೆ ಕಾಯುತ್ತಿದ್ದು, ಮಾತುಕತೆ ಮೂಲಕ ಎಲ್ಲಾ ವಿವಾದಗಳನ್ನು ಬಗೆಹರಿಸಿ, ಶಾಂತಿ ಸ್ಥಾಪಿಸಲು ಸಿದ್ಧ ಅಂತ ಹೇಳಿದೆ. ಕಿಮ್ ಜಾಂಗ್ ಉನ್​​​​ ಪರಮಾಣು ಮತ್ತು ಮಿಸೈಲ್ ಕಾರ್ಯಕ್ರಮಗಳಿಂದಾಗಿ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡ್ತಾ ಸಾಗಿತ್ತು. ಆದ್ರೂ ಕೂಡ ಸೌತ್ ಕೊರಿಯಾ ನಾರ್ಥ್ ಕೊರಿಯಾ ಜೊತೆ ಕೆಲವೊಂದು ಆರ್ಥಿಕ ಮತ್ತು ಪ್ರವಾಸೋದ್ಯಮ ಸಂಬಂಧ ಒಪ್ಪಂದಗಳನ್ನು ಮಾಡಿಕೊಳ್ಳಲು ಹಾತೊರೆಯುತ್ತಿದೆ. ಹೀಗಾಗಿ ಮಾತುಕತೆಯ ಆಫರ್ ಮುಂದಿಟ್ಟಿದ್ದಾರೆ ಮೂನ್ ಜಾಯ್ ಇನ್​​.. ಈ ನಡುವೆ ಮೇ 21ರಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಾಯ್ ಇನ್ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ವಾಷಿಂಗ್ಟನ್​​​​​​​​ನಲ್ಲಿ ಜೋ ಬೈಡೆನ್ ಜೊತೆ ಮಾತುಕತೆ ನಡೆಸಲಿದ್ಧಾರೆ. ಈ ವೇಳೆ ನಾರ್ಥ್ ಕೊರಿಯಾದ ಜೊತೆಗೆ ಅಮೆರಿಕ ಸಂಬಂಧ ಸುಧಾರಿಸುವ ಕಡೆಗೂ ದಕ್ಷಿಣ ಕೊರಿಯಾ ಒತ್ತು ನೀಡೋ ಸಾಧ್ಯತೆ ಇದೆ. ಆದ್ರೆ ಬೈಡೆನ್ ಸರ್ಕಾರ ನಾರ್ಥ್ ಕೊರಿಯಾಗೆ ಅಷ್ಟೊಂದು ಮಹತ್ವ ನೀಡ್ತಾ ಇಲ್ಲ.. ನಿರ್ಬಂಧಗಳನ್ನು ತೆರೆಯೋ ಲಕ್ಷಣ ಕೂಡ ಕಾಣ್ತಾ ಇಲ್ಲ.

-masthmagaa.com

Contact Us for Advertisement

Leave a Reply