ಜಮ್ಮು ಕಾಶ್ಮೀರದಲ್ಲಿ ಪೊಲೀಸ್ ಅಧಿಕಾರಿ ಕುಟುಂಬದ ಹತ್ಯೆ!

masthmagaa.com:

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹರಿಪರಿಗಂ ಎಂಬಲ್ಲಿ ನಿನ್ನೆ ವಿಶೇಷ ಪೊಲೀಸ್ ಅಧಿಕಾರಿ ಫಯಾಜ್ ಅಹ್ಮದ್ ಮನೆಗೆ ನುಗ್ಗಿದ ಇಬ್ಬರು ಉಗ್ರರು ಆತನನ್ನ ಗುಂಡಿಕ್ಕಿ ಕೊಂದಿದ್ದಾರೆ. ಈ ವೇಳೆ ಉಗ್ರರನ್ನ ತಡೆಯಲು ಬಂದ ಪೊಲೀಸ್​ ಅಧಿಕಾರಿಯ ಪತ್ನಿ ಮತ್ತು ಮಗಳ ಮೇಲೂ ಉಗ್ರರು ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ​ ಪತ್ನಿ ಮತ್ತು ಪುತ್ರಿ ಇಬ್ಬರೂ ಕೂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಂದುಕಡೆ ಹಲವು ಹತ್ಯೆಗಳಲ್ಲಿ ಭಾಗಿಯಾಗಿದ್ದ ಎಲ್​ಇಟಿ ಕಮಾಂಡರ್​ ನದೀಮ್ ಅಬ್ರಾರ್​ ಅನ್ನೋನನ್ನ ಜಮ್ಮು-ಕಾಶ್ಮೀರದಲ್ಲಿ ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply