HDFC Bank ಜೊತೆ HDFC ವಿಲೀನ.. ಏನಿದರ ಅರ್ಥ?

masthmagaa.com:

ಹೌಸಿಂಗ್ ಫೈನಾನ್ಸ್ ಕಂಪನಿ HDFC ಹಾಗೂ ಸುಮಾರು 6.8 ಕೋಟಿ ಖಾತೆದಾರರನ್ನ ಹೊಂದಿರೋ HDFC BANK ಮರ್ಜ್ ಆಗುವ ಘೋಷಣೆ ಆಗಿದೆ. ಇದರ ಅನ್ವಯ ಫೈನಾನ್ಸ್ ಕಂಪನಿ HDFCಯ ಶೇರುದಾರರಿಗೆ HDFC BANKನ ಶೇರುಗಳು ಸಿಗಲಿವೆ. ಫೈನಾನ್ಸ್ ಕಂಪನಿ HDFCಯಲ್ಲಿ ಇದ್ದ ಪ್ರತಿ 25 ಶೇರುಗಳಿಗೆ ಪ್ರತಿಯಾಗಿ 42 HDFC BANKನ ಶೇರುಗಳು ಸಿಗಲಿವೆ. HDFC ಬ್ಯಾಂಕ್ ಸಂಪೂರ್ಣ ಪಬ್ಲಿಕ್ ಶೇರ್ ಹೋಲ್ಡರ್ಸ್ ಮಾಲೀಕತ್ವದ ಕಂಪನಿಯಾಗಲಿದೆ. ಈಗ ಕೇವಲ ಘೋಷಣೆ ಆಗಿದೆ. ಮುಂದೆ RBI, SEBI ಸೇರಿ ಎಲ್ಲ ರೆಗುಲೇಟರಿ ಅಪ್ರೂವಲ್ ಸಿಕ್ಕ ಬಳಿಕ ಇದು ವಾಸ್ತವದಲ್ಲಿ ಜಾರಿಗೆ ಬರುತ್ತೆ. ಆದ್ರೆ ಕೇಔಲ ಘೋಷಣೆಯಿಂದಲೇ ಥ್ರಿಲ್ ಆದ ಶೇರುಮಾರುಕಟ್ಟೆಯಲ್ಲಿ ಇವತ್ತು HDFC ಬ್ಯಾಂಕ್ ಶೇರುಗಳು ಸುಮಾರು 10% ರೈಸ್ ಆಗಿವೆ.
ಈ ಎರಡೂ ಕಂಪನಿಗಳು ಮರ್ಜ್ ಆದಾಗ ಕಂಬೈಂಡ್ ಬ್ಯಾಲನ್ಸ್ ಶೀಟ್ 17.87 ಲಕ್ಷ ಕೋಟಿ ಆಗಲಿದೆ. ಕಂಪನಿಯ ನೆಟ್ ವರ್ತ್ 3.3 ಲಕ್ಷ ಕೋಟಿ ಆಗಲಿದೆ. ಇದು ಮಾರ್ಕೆಟ್ ಕ್ಯಾಪಿಟಲೈಸೇಶನ್ ವಿಚಾರದಲ್ಲಿ ರಿಲಯನ್ಸ್ ಹಾಗೂ ಟಾಟಾ ನಂತರ ಭಾರತದ ಮೂರನೇ ಅತಿದೊಡ್ಡ ಕಂಪನಿಯಾಗಲಿದೆ. ಆದ್ರೆ ಎರಡೂ ಕಂಪನಿಗಳಲ್ಲಿ ಕೆಲಸ ಮಾಡ್ತಿರೋ ಉದ್ಯೋಗಿಗಳಿಗೆ ಏನೂ ಸಮಸ್ಯೆ ಆಗೋದಿಲ್ಲ ಅಂತ ಕೂಡ ಕಂಪನಿ ಹೇಳಿದೆ.

-masthmagaa.com

Contact Us for Advertisement

Leave a Reply