ಮೇ 29ರ ಹೆಲ್ತ್​ ಬುಲೆಟಿನ್: ದೇಶದಲ್ಲಿ ಒಂದೇ ದಿನ ಎರಡು ದಾಖಲೆ..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 7,466 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಕಾಯಿಲೆ ಕಾಣಿಸಿಕೊಂಡಾಗಿನಿಂದ ಒಂದೇ ದಿನದಲ್ಲಿ ಇಷ್ಟು ಜನರಿಗೆ ಸೋಂಕು ತಗುಲಿರೋದು ಇದೇ ಮೊದಲು. ಮೇ 25ರಂದು ದಾಖಲೆಯ 6,977 ಜನರಿಗೆ ಕಾಯಿಲೆ ಹರಡಿತ್ತು. ದೇಶದಲ್ಲಿ ಸದ್ಯ ಒಟ್ಟು ಸೋಂಕಿತರ ಸಂಖ್ಯೆ 1,65,799ಕ್ಕೆ ಏರಿಕೆಯಾಗಿದೆ. ಈ ಮೂಲಕ ಸೋಂಕಿತರ ಪಟ್ಟಿಯಲ್ಲಿ ಟರ್ಕಿ ದೇಶವನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೆ ಬಂದಿದೆ ಭಾರತ. ಟರ್ಕಿಯಲ್ಲಿ 1,60,000 ಜನರಿಗೆ ಸೋಂಕು ತಗುಲಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 175 ಜನ ಮೃತಪಟ್ಟಿದ್ದು, ಒಟ್ಟು ಬಲಿಯಾದವರ ಸಂಖ್ಯೆ 4,706 ಆಗಿದೆ. ದೇಶದಲ್ಲಿ ಸದ್ಯ 71,105 ಮಂದಿ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ 89,987 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಬರೋಬ್ಬರಿ 59 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ತಮಿಳುನಾಡಿನಲ್ಲಿ 19 ಸಾವಿರ, ದೆಹಲಿಯಲ್ಲಿ 16 ಸಾವಿರ ಮತ್ತು ಗುಜರಾತ್​ನಲ್ಲಿ 15 ಸಾವಿರಕ್ಕೂ ಹೆಚ್ಚು ​ ಪ್ರಕರಣಗಳು ದೃಢಪಟ್ಟಿವೆ. ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply