ಶ್ರೀಲಂಕಾದಲ್ಲಿ ಐಸಿಸ್​, ಅಲ್​-ಖೈದಾ ಸೇರಿ 11 ಉಗ್ರ ಸಂಘಟನೆಗೆ ನಿಷೇಧ

masthmagaa.com:

ಐಸಿಸ್​, ಅಲ್​-ಖೈದಾ ಉಗ್ರ ಸಂಘಟನೆಗಳು ಸೇರಿದಂತೆ ಒಟ್ಟು 11 ಮುಸ್ಲಿಂ ಮೂಲಭೂತವಾದಿ ಗುಂಪುಗಳನ್ನ ಶ್ರೀಲಂಕಾ ಸರ್ಕಾರ ಬ್ಯಾನ್ ಮಾಡಿದೆ. ಇದರಲ್ಲಿ ಸ್ಥಳೀಯ ಶ್ರೀಲಂಕಾ ಇಸ್ಲಾಮಿಕ್ ಸ್ಟೂಡೆಂಟ್ಸ್ ಮೂವ್​ಮೆಂಟ್ ಕೂಡ ಸೇರಿದೆ. ಒಂದ್ವೇಳೆ ಯಾವುದಾದ್ರೂ ವ್ಯಕ್ತಿ ಈ ಸಂಘಟನೆಗಳ ಜೊತೆ ಸೇರಿಕೊಂಡು ಸಂಚು ರೂಪಿಸಿದ್ರೆ ಅಂಥವರಿಗೆ 10ರಿಂದ 20 ವರ್ಷ ಜೈಲು ಶಿಕ್ಷೆ ವಿಧಿಸೋದಾಗಿ ಸರ್ಕಾರ ಹೇಳಿದೆ. 2019ರಲ್ಲಿ ಈಸ್ಟರ್ ಸಂಡೇ ದಿನ ಚರ್ಚ್​​ ಮತ್ತು ಐಷಾರಾಮಿ ಹೋಟೆಲ್​ಗಳ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 280 ಜನ ಮೃತಪಟ್ಟಿದ್ದರು. ಇದಕ್ಕೆ ಕಾರಣವಾದ ನ್ಯಾಷನಲ್ ತೌಹೀತ್ ಜಮಾತ್ (NTJ) ಮತ್ತು ಬೇರೆ ಎರಡು ಸಂಘಟನೆಗಳನ್ನ ಶ್ರೀಲಂಕಾ ಸರ್ಕಾರ ಬ್ಯಾನ್ ಮಾಡಿತ್ತು. ಇದೀಗ ಮತ್ತೆ 11 ಸಂಘಟನೆಗಳನ್ನ ಬ್ಯಾನ್ ಮಾಡಿದೆ.

-masthmagaa.com

Contact Us for Advertisement

Leave a Reply