ಪೇಪರ್​​ ಮತ್ತು ಇಂಕ್ ಕೊರತೆ! ಶ್ರೀಲಂಕಾದಲ್ಲಿ ಪರೀಕ್ಷೆಯೇ ರದ್ದು

masthmagaa.com:

ಶ್ರೀಲಂಕಾದಲ್ಲಿ ಪ್ರಿಂಟಿಂಗ್ ಪೇಪರ್ ಮತ್ತು ಇಂಕ್​​ ಕೊರತೆಯಿಂದಾಗಿ ಲಕ್ಷಾಂತರ ಮಕ್ಕಳ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ಶ್ರೀಲಂಕಾದ ಬಳಿ ಡಾಲರ್ ಕೊರತೆ ಇರೋದ್ರಿಂದ ಪೇಪರ್ ಮತ್ತು ಇಂಕ್ ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರೋ ಶೈಕ್ಷಣಿಕ ಸಂಸ್ಥೆಗಳು ದೇಶದಲ್ಲಿ ಪೇಪರ್ ಕೊರತೆ ಇರೋದ್ರಿಂದ ಟೆಸ್ಟ್​​ಗಳನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಅಂತ ಮಾಹಿತಿ ನೀಡಿವೆ. ಇದ್ರಿಂದ 45 ಲಕ್ಷ ಮಕ್ಕಳ ಪರೀಕ್ಷೆಗೆ ತಡೆಯೊಡ್ಡಿದಂತಾಗಿದೆ. ಅಂದಹಾಗೆ ಶ್ರೀಲಂಕಾ 1948ರಿಂದ ಅಂದ್ರೆ ಸ್ವಾತಂತ್ರ್ಯಗೊಂಡ ಬಳಿಕ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ.

-masthmagaa.com

Contact Us for Advertisement

Leave a Reply