ಬುರ್ಖಾ ಬ್ಯಾನ್​ಗೆ ಒಪ್ಪಿಗೆ ನೀಡಿದ ಶ್ರೀಲಂಕಾ ಕ್ಯಾಬಿನೆಟ್

masthmagaa.com:

ಶ್ರೀಲಂಕಾದಲ್ಲಿ ಮುಸ್ಲಿಂ ಬುರ್ಖಾ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಮುಖಕ್ಕೆ ಮುಸುಕು ಧರಿಸೋದನ್ನ ಬ್ಯಾನ್​ ಮಾಡುವ ಪ್ರಸ್ತಾವನೆಗೆ ಶ್ರೀಲಂಕಾ ಕ್ಯಾಬಿನೆಟ್​​ ಒಪ್ಪಿಗೆ ನೀಡಿದೆ. ಈ ಮಸೂದೆ ಈಗ ಶ್ರೀಲಂಕಾ ಪಾರ್ಲಿಮೆಂಟ್​ನಲ್ಲಿ ಪಾಸ್ ಆಗಬೇಕು. ಆಮೇಲೆ ಕಾನೂನು ಅಗುತ್ತೆ. ಪಾರ್ಲಿಮೆಂಟ್​​ನಲ್ಲಿ ಸರ್ಕಾರಕ್ಕೆ ಬಹುಮತ ಇರೋದ್ರಿಂದ ಮಸೂದೆ ಆರಾಮಾಗಿ ಪಾಸ್ ಅಗಲಿದೆ. ರಾಷ್ಟ್ರೀಯ ಭದ್ರತೆ ಕಾರಣವನ್ನ ನೀಡಿ ಬುರ್ಖಾ ಸೇರಿದಂತೆ ಮುಖಕ್ಕೆ ಧರಿಸೋ ಮುಸುಕು ಬ್ಯಾನ್ ಮಾಡಲು ಶ್ರೀಲಂಕಾ ಸರ್ಕಾರ ಮುಂದಾಗಿದೆ. ಆದ್ರೆ ಇದಕ್ಕೆ ಪಾಕಿಸ್ತಾನ ಸೇರಿದಂತೆ ಮುಸ್ಲಿಂ ರಾಷ್ಟ್ರಗಳಿಂದ ವಿರೋಧ ಕೇಳಿ ಬರ್ತಿದೆ. ವಿಶ್ವಸಂಸ್ಥೆಯ ತಜ್ಞರು ಕೂಡ ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ ಅಂತ ಹೇಳ್ತಿದ್ದಾರೆ. ಎಲ್ಲಾ ವಿರೋಧಗಳ ನಡುವೆಯೇ ಶ್ರೀಲಂಕಾ ಸಚಿವ ಸಂಪುಟ ಬುರ್ಖಾ ಬ್ಯಾನ್​ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. 2019ರಲ್ಲಿ ಈಸ್ಟರ್ ಸಂಡೇ ಆತ್ಮಾಹುತಿ ದಾಳಿ ಬಳಿಕವೂ ಕೆಲ ಸಮಯದವರೆಗೆ ಬುರ್ಖಾ ಧರಿಸೋದನ್ನ ಶ್ರೀಲಂಕಾದಲ್ಲಿ ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿತ್ತು. 2.2 ಕೋಟಿ ಜನಸಂಖ್ಯೆ ಇರೋ ಶ್ರೀಲಂಕಾದಲ್ಲಿ 70 ಪರ್ಸೆಂಟ್​ ಜನ ಬೌದ್ಧರಿದ್ದಾರೆ. ಅದ್​ಬಿಟ್ರೆ ತಮಿಳರು 15 ಪರ್ಸೆಂಟ್​ ಇದ್ದಾರೆ. ಮುಸ್ಲಿಮರು 9 ಪರ್ಸೆಂಟ್​​ ಇದ್ದಾರೆ.

-masthmagaa.com

Contact Us for Advertisement

Leave a Reply