ವಿಶ್ವಕಪ್‌ಗೆ ತೆರಳಿದ್ದ ಲಂಕಾದ ಕ್ರಿಕೆಟಿಗನ ಮೇಲೆ ಅತ್ಯಾಚಾರದ ಆರೋಪ!ಆಸ್ಟ್ರೇಲಿಯಾದಲ್ಲೇ ಬಂಧನ!

masthmagaa.com:

ಶ್ರೀಲಂಕಾದ ಸ್ಟಾರ್ ಕ್ರಿಕೆಟರ್ ಧನುಷ್ಕ ಗುಣ ತಿಲಕರನ್ನ ಆಸ್ಟ್ರೇಲಿಯಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. T20 ವಿಶ್ವಕಪ್‌ನ ಲಂಕಾ ತಂಡದ ಭಾಗವಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ಈತ ಅಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂತ 29 ವರ್ಷದ ಮಹಿಳೆಯೊಬ್ರು ದೂರು ನೀಡಿದ್ದಾರೆ. ಈ ಬಗ್ಗೆ ಅಲ್ಲಿನ ನ್ಯೂ ಸೌತ್‌ ವೇಲ್ಸ್‌ನ ಪೊಲೀಸರು ಕೂಡ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಹಲವು ದಿನಗಳಿಂದ ಕ್ರಿಕೆಟರ್‌ಗೆ ಮೆಸೇಜ್‌ ಮಾಡ್ತಿದ್ದ ಈ ಮಹಿಳೆ ನವೆಂಬರ್‌ 2 ರಂದು ರೋಸ್‌ ಬೇನಲ್ಲಿ ಆತನನ್ನ ಭೇಟಿಯಾಗಿದ್ಲು. ಆ ಸಂಧರ್ಭದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸಿಸಿಟಿವಿ ಫುಟೇಜ್‌ಗಳನ್ನ ಆಧರಿಸಿ ತನಿಖೆ ನಡೆಸ್ತಿದ್ದೀವಿ ಅಂತ ಹೇಳಿದೆ. ಅಂದ್ಹಾಗೆ ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಗೆ ಹೋಗಿದ್ದ ಈತ ಕ್ವಾಲಿಫಯರ್‌ ಪಂಧ್ಯದಲ್ಲಿ ನಮೀಬಿಯ ವಿರುದ್ದ ಕೂಡ ಆಟ ಆಡಿದ್ರು. ಬಳಿಕ ಇಂಜ್ಯೂರಿಯಾಗಿ ರೆಸ್ಟ್‌ನಲ್ಲಿ ಇದ್ರು. ಇದಾದ ಮೇಲೆ ಈ ಘಟನೆ ಆಗಿದೆ ಅಂತ ಆರೋಪ ಕೇಳಿಬಂದಿದೆ. ಇನ್ನು ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಎಲಿಮನೇಟ್‌ ಆಗಿರೋ ಲಂಕಾ ತಂಡ ಈಗಾಗಲೇ ತವರಿಗೆ ಮರಳಿದೆ. ಆದ್ರೆ ಈ ಧನುಷ್ಕ ಗುಣ ತಿಲಕ ಮಾತ್ರ ಆಸ್ಟ್ರೇಲಿಯಾ ಪೊಲೀಸರ ವಶದಲ್ಲಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿವೆ. 2015ರಿಂದಲೂ ಲಂಕಾ ಟೀಂನ ಪರವಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡ್ತಿರೋ ಧನುಷ್ಕ ಅವರು, ಪ್ರಸ್ತುತ ಲಂಕಾದ ಓಪನರ್‌ ಬ್ಯಾಟ್ಸ್‌ಮನ್‌ ಕೂಡ ಹೌದು

-masthmagaa.com

Contact Us for Advertisement

Leave a Reply