ಚೀನಾದಿಂದ ಮತ್ತೆ ಲೋನ್ ಮಾಡಿದ ಶ್ರೀಲಂಕಾ!

masthmagaa.com:

ಶ್ರೀಲಂಕಾ ಚೀನಾ ಜೊತೆಗೆ ಮತ್ತೊಂದು ಲೋನ್ ಅಗ್ರಿಮೆಂಟ್​​​ಗೆ ಸಹಿ ಹಾಕಿದೆ. 30 ಕೋಟಿ ಡಾಲರ್ ಅಂದ್ರೆ 2,220 ಕೋಟಿ ರೂಪಾಯಿ ಮೊತ್ತದ ಸಾಲದ ಒಪ್ಪಂದ ಇದಾಗಿದೆ. ಚೀನಾ ಡೆವಲಪ್​​ಮೆಂಟ್ ಬ್ಯಾಂಕ್​​, ಶ್ರೀಲಂಕಾ ಸರ್ಕಾರದ ನಡುವೆ ಈ ಒಪ್ಪಂದ ಏರ್ಪಟ್ಟಿದೆ. ಕೊರೋನಾ ಪರಿಹಾರ, ಆರ್ಥಿಕ ಪುನರುಜ್ಜೀವನ ಮತ್ತು ಆರ್ಥಿಕ ಸ್ಥಿರತೆಗಾಗಿ ಈ ಸಾಲ ನೀಡ್ತಿರೋದಾಗಿ ಚೀನಾ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಈ ಹಿಂದೆ ಇದೇ ಚೀನಾದಿಂದ ಶ್ರೀಲಂಕಾ ಸರ್ಕಾರ 2020ರ ಮಾರ್ಚ್​​ನಲ್ಲಿ 50 ಕೋಟಿ ಮತ್ತು 2021ರ ಏಪ್ರಿಲ್​ನಲ್ಲಿ 50 ಕೋಟಿ ಡಾಲರ್​​​ ಸಾಲ ಪಡೆದಿತ್ತು. ಇದ್ರ ನಡುವೆಯೇ ಸಾಲ ಕೊಟ್ಟು ಕೊಟ್ಟು ಶ್ರೀಲಂಕಾವನ್ನು ಮುಳುಗಿಸೋಕೆ ಚೀನಾ ಪ್ರಯತ್ನಿಸ್ತಿದೆ ಅನ್ನೋ ಆರೋಪಗಳು ಕೇಳಿ ಬರ್ತಿವೆ. ಆದ್ರೆ ಇದನ್ನು ಶ್ರೀಲಂಕಾ ಸರ್ಕಾರ ತಳ್ಳಿಹಾಕಿದೆ.

-masthmagaa.com

Contact Us for Advertisement

Leave a Reply