ಶ್ರೀಲಂಕಾದಲ್ಲಿ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ!

masthmagaa.com:

ಶ್ರೀಲಂಕಾದಲ್ಲಿ ಆಸ್ಟ್ರಾಝೆನೆಕಾ ಲಸಿಕೆ ಪಡೆದವರ ಪೈಕಿ 6 ಜನರಲ್ಲಿ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡಪರಿಣಾಮ ಕಾಣಿಸಿಕೊಂಡಿತ್ತು ಅಂತ ಶ್ರೀಲಂಕಾದ ಆರೋಗ್ಯ ಸಚಿವರು ಅಲ್ಲಿನ ಸಂಸತ್​​ಗೆ ಮಾಹಿತಿ ನೀಡಿದ್ದಾರೆ. ಆ 6 ಜನರಲ್ಲಿ ಮೂವರು ಮೃತಪಟ್ಟಿದ್ದಾರೆ ಅಂತಾನೂ ಹೇಳಿದ್ದಾರೆ. ಶ್ರೀಲಂಕಾದಲ್ಲಿ ನೀಡ್ತಿರೋದು ಭಾರತದಲ್ಲಿ ಉತ್ಪಾದನೆಯಾಗ್ತಿರೋ ಕೋವಿಶೀಲ್ಡ್ ಲಸಿಕೆಯನ್ನ. ಈಗಾಗಲೇ ಈ ಲಸಿಕೆಯ ಮೊದಲ ಡೋಸ್​ ಅನ್ನ ಶ್ರೀಲಂಕಾದಲ್ಲಿ ಸುಮಾರು 10 ಲಕ್ಷ ಜನರಿಗೆ ಕೊಡಲಾಗಿದೆ. ರಕ್ತ ಹೆಪ್ಪುಗಟ್ಟುವಿಕೆಯ ಅಡ್ಡಪರಿಣಾಮ ಕಾಣಿಸಿಕೊಂಡರೂ ಶ್ರೀಲಂಕಾದಲ್ಲಿ ಲಸಿಕೆ ಅಭಿಯಾನವನ್ನ ಸ್ಥಗಿತಗೊಳಿಸುವ ಬಗ್ಗೆ ಅಲ್ಲಿನ ಸರ್ಕಾರ ಇದುವರೆಗೆ ಯಾವುದೇ ಘೋಷಣೆ ಮಾಡಿಲ್ಲ.

-masthmagaa.com

Contact Us for Advertisement

Leave a Reply