masthmagaa.com:

ಶ್ರೀಲಂಕಾದಲ್ಲಿ ಬುರ್ಕಾ ಬ್ಯಾನ್ ಮಾಡಲಾಗುತ್ತೆ. ಹಾಗು 1 ಸಾವಿರಕ್ಕೂ ಅಧಿಕ ಮದರಸಾ ಶಾಲೆಗಳನ್ನ ಬಂದ್ ಮಾಡಲಾಗುತ್ತೆ ಅಂತ ಅಲ್ಲಿನ ಸಾರ್ವಜನಿಕ ರಕ್ಷಣಾ ಸಚಿವ ವೀರಾಸೇಕರ ಹೇಳಿದ್ದಾರೆ. ‘ನಾನು ಈಗಾಗಲೇ ಈ ಸಂಬಂಧ ಪೇಪರ್​ಗೆ ಸೈನ್ ಮಾಡಿದ್ದೇನೆ. ಸಂಪುಟ ಅನುಮೋದನೆ ನಿಡೋದಷ್ಟೇ ಬಾಕಿ’ ಅಂತ ಹೇಳಿದ್ದಾರೆ. ಈ ಹಿಂದೆ 2019ರಲ್ಲಿ ಶ್ರೀಲಂಕಾ ಚರ್ಚ್ ಹಾಗೂ ಹೋಟೆಲ್​ಗಳ ಮೇಲಿನ ಭಯೋತ್ಪಾದನಾ ದಾಳಿಗಳ ಬಳಿಕ ಅಲ್ಲಿ ತಾತ್ಕಾಲಿಕವಾಗಿ ಬುರ್ಖಾ ಬ್ಯಾನ್ ಮಾಡಲಾಗಿತ್ತು. ಅದಾದ ಬಳಿಕದ ಚುನಾವಣೆಯಲ್ಲಿ ಗೋಟಬಯ ಸಹೋದರರು ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ರು.

ಇದೀಗ ಮೊನ್ನೆ ಮೊನ್ನೆ ಸ್ವಿಜರ್​ಲ್ಯಾಂಡ್​​ ಬುರ್ಖಾ ಬ್ಯಾನ್ ಮಾಡಿದ ಬೆನ್ನಲ್ಲೇ ಶ್ರೀಲಂಕಾ ಕೂಡ ಅದೇ ಹೆಜ್ಜೆ ಇಡೋಕೆ ಮುಂದಾಗಿದೆ. ಪರ್ಮನೆಂಟ್ ಬ್ಯಾನ್ ಮಾಡೋಕೆ ರೆಡಿ ಆಗಿದೆ. ಈ ಬಗ್ಗೆ ವಿವರಿಸಿದ ಸಚಿವ ವೀರಾಸೇಕರ, ‘ಮೊದಲೆಲ್ಲ ನಮ್ಮ ದೇಶದ ಮುಸ್ಲಿಂ ಹೆಣ್ಣು ಮಕ್ಕಳು ಬುರ್ಖಾ ಹಾಕೋದು ನಾವೆಲ್ಲ ನೋಡಿಲ್ಲ. ಆದ್ರೆ ಇತ್ತೀಚಿಗೆ ಜಾಸ್ತಿಯಾಗಿದೆ. ಇದು ಧಾರ್ಮಿಕ ಅತಿರೇಕದ ಸಂಕೇತ. ಮೂಲಭೂತವಾದದ ಸಂಕೇತ. ಜೊತೆಗೆ ಮದರಸಾಗಳೂ ಅಷ್ಟೆ. ಸರ್ಕಾರದ ನಿಯಮಗಳನ್ನ ಪಾಲಿಸಬೇಕು.

ಬೇಕಾಬಿಟ್ಟಿ ಶಾಲೆಗಳನ್ನ ಓಪನ್ ಮಾಡಿ ನಿಮಗೆ ಇಷ್ಟ ಬಂದಿದ್ದನ್ನೆಲ್ಲ ಎಳೆ ಮಕ್ಕಳ ತಲೆಗೆ ತುಂಬಲು ಯಾರಿಗೂ ಅಧಿಕಾರವಿಲ್ಲ. ಖಂಡಿತ ನಮ್ಮ ಸರ್ಕಾರ ಇದನ್ನೆಲ್ಲ ಬ್ಯಾನ್ ಮಾಡುತ್ತೆ’ ಅಂತ ವೀರಾಸೇಕರ ಹೇಳಿದ್ದಾರೆ. ಶ್ರೀಲಂಕದ ಜನಸಂಖ್ಯೆ 2 ಕೋಟಿ 20 ಲಕ್ಷ… ಇದರಲ್ಲಿ 70 ಪರ್ಸೆಂಟ್ ಬುದ್ಧಿಸ್ಟ್, 12 ಪರ್ಸೆಂಟ್ ಹಿಂದೂಗಳು… ಹೆಚ್ಚಿನವರು ತಮಿಳರು, ಹಾಗೂ 9 ಪರ್ಸೆಂಟ್ ಮುಸ್ಲಿಮರು, 7 ಪರ್ಸೆಂಟ್ ಕ್ರಿಶ್ಚಿಯನ್ಸ್ ಇದ್ದಾರೆ.

-masthmagaa.com

Contact Us for Advertisement

Leave a Reply