ಶ್ರೀನಿಧಿ ಶೆಟ್ಟಿ- ರಕ್ಷಿತ್ ಶೆಟ್ಟಿ ಸ್ವೀಟ್‌ ಟ್ವೀಟ್‌ ವಾರ್‌!

masthmagaa.com:

ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬ್ಯಾಚುಲರ್ ಆಗಿದ್ದುಕೊಂಡೇ ಕನ್ನಡಿಗರಿಗೆ ಸೂಪರ್ ಹಿಟ್ ಸಿನಿಮಾ ಗಳನ್ನು ಕೊಡುತ್ತಿರುತ್ತಾರೆ.
ಈ ಹಿಂದಿನಿಂದಲೂ ರಕ್ಷಿತ್ ಶೆಟ್ಟಿ ಪ್ರೀತಿ, ಪ್ರೇಮ, ಮದುವೆ ಹಾಗೂ ಎಂಗೇಜ್‌ಮೆಂಟ್ ವಿಷಯಗಳ ಕುರಿತಾಗಿ ಸಾಕಷ್ಟು ಸುದ್ದಿಗೀಡಾಗಿ ಚರ್ಚೆಗೆ ಒಳಗಾದವರೇ. ಕಿರಿಕ್ ಪಾರ್ಟಿ ಸಿನಿಮಾ ಬಳಿಕ ಅದೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಜತೆ ರಕ್ಷಿತ್ ಶೆಟ್ಟಿ ಪ್ರೀತಿಯಲ್ಲಿ ಬಿದ್ದದ್ದು, ಇಬ್ಬರೂ ಪರಸ್ಪರ ಒಪ್ಪಿಕೊಂಡು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ಧವಾದದ್ದು ಹಾಗೂ ಆ ಬಳಿಕ ಮದುವೆ ಮುರಿದು ಬಿದ್ದದ್ದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗೆ ರಶ್ಮಿಕಾ ಮಂದಣ್ಣ ಜತೆ ಮದುವೆ ಮುರಿದು ಬಿದ್ದ ಬಳಿಕ ಮತ್ತೆ ಸಿಂಗಲ್ ಆದ ರಕ್ಷಿತ್ ಶೆಟ್ಟಿ ಜತೆ ಕೆಲವೊಂದಷ್ಟು ನಟಿಯರ ಹೆಸರೂ ಸಹ ಸೇರಿ ಗಾಸಿಪ್ ಆಗಿ ಸುದ್ದಿಗಳು ಹರಿದಾಡಿದ್ದವು. ಹೌದು. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ನಟಿಸಿದ್ದ ಸಾನ್ವಿ ಶ್ರೀವಾಸ್ತವ ಹೆಸರೂ ಸಹ ರಕ್ಷಿತ್ ಶೆಟ್ಟಿ ಜತೆ ಸೇರಿಕೊಂಡಿತ್ತು. ಇಬ್ಬರೂ ಒಟ್ಟಿಗೆ ಹಂಚಿಕೊಂಡಿದ್ದ ಸೆಲ್ಫೀ ಫೊಟೊ ಕಂಡು ಪ್ರತಿಕ್ರಿಯಿಸಿದ್ದ ನೆಟ್ಟಿಗರು ಒಳ್ಳೆ ಜೋಡಿ ಮದುವೆಯಾಗಿಬಿಡಿ ಶೆಟ್ರೇ ಎಂದಿದ್ದರು ಹಾಗೂ ಇನ್ನೂ ಕೆಲವರು ಇಬ್ಬರ ನಡುವೆ ಲವ್ ಇದೆ ಎಂದೂ ಸಹ ಕಾಮೆಂಟ್ ಮಾಡಿದ್ದರು. ಸದ್ಯ ಸಾನ್ವಿ ರೀತಿಯೇ ಮತ್ತೋರ್ವ ನಟಿ ಜತೆ ರಕ್ಷಿತ್ ಶೆಟ್ಟಿ ಹೆಸರು ಕೇಳಿಬರುತ್ತಿದೆ. ಹೌದು, ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ಹೆಸರು ಸದ್ಯ ರಕ್ಷಿತ್ ಶೆಟ್ಟಿ ಹೆಸರಿನ ಜತೆ ಸೇರಿಕೊಂಡಿದೆ.

ಕೆಜಿಎಫ್‌ ಖ್ಯಾತಿಯ ಶ್ರೀನಿಧಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊವೊಂದನ್ನ ಶೇರ್‌ ಮಾಡಿ ” ಹಾಗೇ ಸುಮ್ಮನೆ” ಅಂತ ಟೈಟಲ್‌ ಕೊಟ್ಟಿದ್ರು. ಅದಕ್ಕೆ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ “ಹೌದು ಶೆಟ್ಟರೆ ಗೊತ್ತಾಯ್ತು” ಅಂತ ತುಳುವಿನಲ್ಲಿ ಕಾಮೆಂಟ್‌ ಮಾಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಶ್ರೀನಿಧಿ ಶೆಟ್ಟಿಯವರು ” ಒಹ್‌ ಗೊತ್ತಾಯ್ತಾ ಹಾಗಾದರೆ ಯಾರಿಗೂ ಹೇಳಬೇಡಿ” ಅಂತ ತುಳುನಲ್ಲೇ ರಿಕಾಮೆಂಟ್‌ ಮಾಡಿದ್ದಾರೆ.

ಶ್ರೀನಿಧಿಯವರು ಸದ್ಯ ತಮಿಳಿನ ಖೊಬ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಅದರ ನಂತರ ಯಾವುದೇ ಅಪ್‌ಡೇಟ್ಸ್‌ಗಳು ಇರಲಿಲ್ಲ.ರಕ್ಷಿತ್‌ ಶೆಟ್ಟಿಯವರು ಸದ್ಯ ಹೊಂಬಳೆ ನಿರ್ಮಾಣ ಸಂಸ್ಥೆಯಲ್ಲಿ ರಿಚರ್ಡ್‌ ಅಂತೋನಿ ಮೂವಿಗೆ ನಿರ್ದೇಶಕರಾಗಿ ಕೆಲಸ ಮಾಡ್ತಾ ಇದಾರೆ. ಅದರಲ್ಲೂ ರಿಚರ್ಡ್‌ ಅಂತೋನಿ ಮೂವಿಗೆ ಇನ್ನೂ ಸಹ ನಾಯಕಿ ಯಾರು ಎಂಬುದು ತಿಳಿದುಬಂದಿಲ್ಲ, ಇನ್‌ಡೈರೆಕ್ಟ್‌ ಆಗಿ ಸಿನಿಮಾ ಬಗ್ಗೆ ಮಾತಾಡ್ತಾ ಇದಾರಾ ಅನ್ನೋದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. something something ಏನಾದ್ರು ಇರಬಹುದಾ ಅಂತ ಕೆಲವೊಬ್ಬರು ಕಾಮೆಂಟ್‌ ಮಾಡಿದ್ರೆ, ಇವರಿಬ್ಬರೂ ಸಿನಿಮಾ ಮಾಡ್ತಾ ಇದಾರೆ ಅಂತ ಇನ್ನೋಂದಿಷ್ಟು ಮಂದಿ ಕಾಮೆಂಟ್‌ ಮಾಡ್ತಾ ಇದಾರೆ. ಈ ಇಬ್ಬರು ಶೆಟ್ರ ಮಾತುಕತೆ ನೋಡಿ ಫ್ಯಾನ್ಸ್ ‘ಅನಿಸುತ್ತಿದೆ ಯಾಕೋ ಇಂದು…’ ಎಂದು ಹೇಳುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ಅವರ ಕಡೆಯಿಂದ ಈ ರಿಪ್ಲೈ ಬಂದ ಮೇಲಂತೂ ನೆಟ್ಟಿಗರು ಇಬ್ಬರ ಕಾಲನ್ನು ಮತ್ತಷ್ಟು ಎಳೆದಿದ್ದಾರೆ. ಓಹೋ ಇಬ್ಬರ ನಡುವೆ ಏನಿದು ಸುದ್ದಿ, ಅಣ್ಣಂಗೆ ಲವ್ ಆಗಿದೆ, ಯಾವಾಗ ಘೋಷಣೆ ಮಾಡ್ತೀರ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply