ದಿನೇಶ್ ಗುಂಡೂರಾವ್ ಸಿದ್ದು ಚೇಲಾ, ಬಕೆಟ್: ಎಸ್.ಟಿ.ಸೋಮಶೇಖರ್ ಬಾಂಬ್

ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ಧ ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಕೆಂಡಕಾರಿದ್ದಾರೆ. ಈಗ ಕಾಂಗ್ರೆಸ್ ಸಿದ್ದರಾಮಯ್ಯನವರ ಕಾಂಗ್ರೆಸ್ ಆಗೋಗಿದೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷದ್ ಅವರ ಕಾಂಗ್ರೆಸ್ ಆಗೋಗಿದೆ. ಒರಿಜಿನಲ್ ಕಾಂಗ್ರೆಸ್ ಎಲ್ಲಿದೆ ಎಂದು ಕೆಂಡಕಾರಿದ್ದಾರೆ. ಅಲ್ಲದೆ ದಿನೇಶ್ ಗುಂಡೂರಾವ್ ಓರ್ವ ಅಯೋಗ್ಯ ಅಧ್ಯಕ್ಷ. ಸಿದ್ದರಾಮಯ್ಯ ಚೇಲಾ, ಬಕೆಟ್. ಅವನಿಗೆ ಕೆಲಸ ಮಾಡಲು ಯೋಗ್ಯತೆ ಇಲ್ಲ. ಅವನು ಸರಿಯಾಗಿ ಕೆಲಸ ಮಾಡಿದ್ರೆ ನಾವ್ಯಾಕೆ ರಾಜೀನಾಮೆ ನೀಡುತ್ತಿದ್ದೆವು..? ಅನರ್ಹರ ಬಗ್ಗೆ ಏನ್ ಮಾತಾಡೋದು ಅವನು ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.

ಅಲ್ಲದೆ ತುಮಕೂರಲ್ಲಿ ದೇವೇಗೌಡ್ರು ಮತ್ತು ಕೋಲಾರದಲ್ಲಿ ಮುನಿಯಪ್ಪ ಸೋಲುವಂತೆ ಮಾಡಿದ್ರು. ಇಲ್ಲದಿದ್ರೆ 7 ಬಾರಿ ಗೆದ್ದಿದ್ದ ಮುನಿಯಪ್ಪ ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ದೋಸ್ತಿ ಸರ್ಕಾರ ಉರುಳಲು ಕಾಂಗ್ರೆಸ್ಸಿನವರೇ ಕಾರಣ. ಆದ್ರೆ ಕಾಂಗ್ರೆಸ್ಸಿಗರಿಂದಲೇ ಸರ್ಕಾರ ಉರುಳಿತು ಅನ್ನೋದು ಗೊತ್ತಾಗದಂತೆ ದಿನೇಶ್ ಗುಂಡೂರಾವ್ ಪ್ಲಾನ್ ಮಾಡಿದ್ದರು ಎಂದು ಸೋಮಶೇಖರ್ ಆರೋಪಿಸಿದ್ದಾರೆ. ಭೈರತಿ ಬಸವರಾಜ್ ಮನೆಯಲ್ಲಿ ಅವರು ಏನೇನು ಮಾತಾಡಿದ್ದರು ಅನ್ನೋದರ ಕ್ಯಾಸೆಟ್ ಇದೆ. ಸುಪ್ರೀಂಕೋರ್ಟ್ ತೀರ್ಪು ಬರಲಿ. ಆಮೇಲೆ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡ್ತೀವಿ ಅಂದ್ರು.

Contact Us for Advertisement

Leave a Reply