ಯುಕ್ರೇನ್-ರಷ್ಯಾ ಯುದ್ಧ ಖಚಿತ? ಎಲ್ಲರೂ ವಾಪಾಸ್ ಓಡಿ ಬನ್ನಿ ಎಂದ ಅಮೆರಿಕ!

masthmagaa.com:

ರಷ್ಯಾದ ಅತಿಕ್ರಮಣದ ಅಪಾಯ ಜಾಸ್ತಿಯಾಗ್ತಿರೋ ಬೆನ್ನಲ್ಲೇ ಯುಕ್ರೇನ್​​ನಲ್ಲಿರೋ ತನ್ನೆಲ್ಲಾ ರಾಜತಾಂತ್ರಿಕರು ಮತ್ತು ಅವರ ಕುಟುಂಬಸ್ಥರು ವಾಪಸ್ ಬರುವಂತೆ ಅಮೆರಿಕ ಆದೇಶಿಸಿದೆ. ರಾಯಭಾರಿ ಕಚೇರಿಯ ಅಗತ್ಯವಲ್ಲದ ಸಿಬ್ಬಂದಿ ಕೂಡ ವಾಪಸ್ ಬರಬೇಕು. ಪೂರ್ವ ಯೂರೋಪ್​ನಲ್ಲಿರೋ ಅಮೆರಿಕನ್ ಪ್ರಜೆಗಳು ಕೂಡ ವಾಪಸ್ಸಾಗಬೇಕು. ಯಾಕಂದ್ರೆ ಒಂದ್ವೇಳೆ ರಷ್ಯಾ ಅತಿಕ್ರಮಿಸಿದ್ರೆ ನಾವು ಸ್ಥಳಾಂತರಿಸೋ ಪರಿಸ್ಥಿತಿಯಲ್ಲಿರೋದಿಲ್ಲ ಅಂತ ಹೇಳಿದೆ. ಆದ್ರೆ ರಾಯಭಾರಿ ಕಚೇರಿಯನ್ನು ಕಂಪ್ಲೀಟಾಗಿ ಮುಚ್ಚೋದಿಲ್ಲ. ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುತ್ತೆ ಅಂತ ಕೂಡ ಅಮೆರಿಕ ತಿಳಿಸಿದೆ. ಈ ಹಿಂದೆಯೂ ವೈಟ್​​ಹೌಸ್​​​​ ಕಡೆಯಿಂದ ರಾಯಭಾರಿ ಕಚೇರಿ ಸಿಬ್ಬಂದಿಗೆ ಯಾವಾಗ ಬೇಕಾದ್ರೂ ದಾಳಿ ನಡೀಬೋದು ಅಂತ ಎಚ್ಚರಿಕೆ ಸಂದೇಶ ರವಾನಿಸಲಾಗಿತ್ತು. ಅಂದಹಾಗೆ ಯುಕ್ರೇನ್​​​ನಲ್ಲಿ ಎಷ್ಟು ಮಂದಿ ಅಮೆರಿಕನ್ನರಿದ್ದಾರೆ ಅಂತ ಇನ್ನೂ ಕೂಡ ಸ್ಪಷ್ಟ ಮಾಹಿತಿ ನೀಡಿಲ್ಲ.. ಕಳೆದ ತಿಂಗಳು 10ರಿಂದ 15 ಸಾವಿರ ಮಂದಿ ಅಮೆರಿಕನ್ನರಿರಬಹುದು ಅಂತ ಸ್ಟೇಟ್ ಡಿಪಾರ್ಟ್​​ಮೆಂಟ್ ಪ್ರತಿನಿಧಿಗಳು ಮಾಹಿತಿ ನೀಡಿದ್ರು. ಇನ್ನು ಅಲ್ಲಿರೋರಿಗೆ ಮಾತ್ರವಲ್ಲ.. ಯಾರೆಲ್ಲ ಅಮೆರಿಕನ್ನರು ಯುಕ್ರೇನ್‌ಗೆ ಹೋಗ್ಬೇಕು ಅಂತ ಅಂದು ಕೊಂಡಿದ್ರೊ ಅವರೆಲ್ಲರಿಗು ಅಮೆರಿಕ ಎಚ್ಚರಿಕೆ ಕೊಟ್ಟಿದೆ.

-masthmagaa.com

Contact Us for Advertisement

Leave a Reply