ಭಾರತ – ಚೀನಾ ಗಡಿಯಲ್ಲಿ ಚೀನಾ ಪ್ರಚೋದನಕಾರಿ ಕೆಲಸ ಮಾಡ್ತಿದೆ ಎಂದ ಅಮೆರಿಕ!

masthmagaa.com:

ಭಾರತ ಮತ್ತು ಚೀನಾದ ಗಡಿಯಲ್ಲಿ ಚೀನಾ ತೆಗದುಕೊಳ್ತಿರುವ ಕೆಲವು ಕ್ರಮಗಳು ಪ್ರಚೋದನಕಾರಿಯಾಗಿವೆ ಅಂತ ಅಮೆರಿಕ ಹೇಳಿದೆ. ಜಾಗತಿಕ ವೇದಿಕೆಯಲ್ಲಿ ಭಾರತ ಶ್ರೇಷ್ಠ ರಾಷ್ಟ್ರವಾಗಿ ಪಾತ್ರ ವಹಿಸುತ್ತಿರುವುದನ್ನ ನಾವು ಅರ್ಥಮಾಡಿಕೊಳ್ಬೇಕು ಅಂತ ಅಮೆರಿಕ ಉನ್ನತ ಅಧಿಕಾರಿ ಕರ್ಟ್‌ ಕ್ಯಾಂಪ್‌ಬೆಲ್‌ ಹೇಳಿದ್ದಾರೆ. ಜೊತೆಗೆ ನಾವು ಭಾರತವನ್ನ ಪ್ರೋತ್ಸಾಹಿಸೋಕೆ ಹಾಗೂ ಬೆಂಬಲಿಸೋಕೆ ಬಯಸುತ್ತೇವೆ. ನಾವು ನಮ್ಮ ಸಂಬಂಧವನ್ನು ಮತ್ತಷ್ಟು ಆಳವಾಗಿ ತೆಗೆದುಕೊಂಡು ಹೋಗಲು ಬಯಸುತ್ತೇವೆ. ಉಭಯ ದೇಶಗಳ ಸಂಬಂಧ ಈಗಾಗಲೇ ತುಂಬಾ ಸ್ಟ್ರಾಂಗ್‌ ಆಗಿದೆ. ಅಮೆರಿಕದ ಜನರು ಜಾಗತಿಕವಾಗಿ ಇತರ ರಾಷ್ಟ್ರಗಳೊಂದಿಗೆ ಹೊಂದಿರೋ ಸಂಬಂಧಗಳಿಗೆ ಹೋಲಿಸಿದ್ರೆ ಭಾರತ-ಅಮೆರಿಕ ನಡುವಿನ ಜನರ ಬಾಂಧವ್ಯ ಅತ್ಯಂತ ಸ್ಟ್ರಾಂಗ್‌ ಇದೆ ಅಂತ ಕ್ಯಾಂಪ್‌ಬೆಲ್‌ ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply