ಯುಕ್ರೇನ್‌ ರಷ್ಯಾ ಸಂಘರ್ಷ: ಯುಕ್ರೇನ್‌ಗೆ ಶಸ್ತ್ರಾಸ್ತ್ರ ನೆರವು

masthmagaa.com:

ಯುದ್ಧಕ್ಕೆ ನುಗ್ಗಿರೋ ರಷ್ಯಾದ ಸೇನೆಗೆ ಭಾರಿ ಹಿನ್ನಡೆಯಾಗ್ತಿದ್ದು, ಯುಕ್ರೇನ್ ಸೈನಿಕರ ಪ್ರತಿರೋಧದರಿಂದ ಫ್ರಸ್ಟ್ರೇಷನ್​​ಗೆ ಒಳಗಾಗ್ತಿದೆ ಅಂತ ಅಮೆರಿಕದ ರಕ್ಷಣಾ ಇಲಾಖೆ ತಿಳಿಸಿದೆ. ಸುಮಾರು ಒಂದೂವರೆ ಲಕ್ಷದಷ್ಟು ರಷ್ಯನ್ ಸೈನಿಕರು ಈ ಆಕ್ರಮಣದಲ್ಲಿ ಭಾಗಿಯಾಗಿದ್ದು, ಈವರೆಗೆ ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಒಂದೂ ದೊಡ್ಡ ನಗರವನ್ನು ವಶಕ್ಕೆ ಪಡೆಯಲು ಅವರಿಗೆ ಆಗಿಲ್ಲ. ಯುಕ್ರೇನ್ ವಾಯುಪಡೆ ಫುಲ್ ಆ್ಯಕ್ಟೀವ್ ಆಗಿದ್ದು, ಈವರೆಗೆ ತಮ್ಮ ವಾಯುಪ್ರದೇಶವನ್ನು ಕಂಟ್ರೋಲ್​​​​ಗೆ ತಗೊಳ್ಳಲು ಬಿಟ್ಟಿಲ್ಲ. ರಷ್ಯಾದ ದೊಡ್ಡಮಟ್ಟದ ಸೇನೆ ಈಗಲೂ ಕಿಯೆವ್​​ನಿಂದ 30 ಕಿಲೋಮೀಟರ್ ದೂರದಲ್ಲಿ ಜಮಾವಣೆಗೊಂಡಿದೆ ಅಂತ ಮಾಹಿತಿ ನೀಡಿದೆ.

ಅಮೆರಿಕ ಮತ್ತು ಮಿತ್ರದೇಶಗಳು ಈಗಲೂ ಶಸ್ತ್ರಾಸ್ತ್ರ ಪೂರೈಸಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ನೆಲದಲ್ಲಿ ಮತ್ತು ಆಕಾಶದಿಂದ ಎದುರಾಗಲಿರೋ ದಾಳಿಗಳನ್ನು ಎದುರಿಸಲು ಯುಕ್ರೇನ್​​ಗೆ ಮತ್ತಷ್ಟು ಸಹಾಯ ಮಾಡ್ತೀವಿ ಅಂತ ಕೂಡ ತಿಳಿಸಿದೆ.

ಮತ್ತೊಂದ್ಕಡೆ ಜರ್ಮನಿ ಕೂಡ ಯುಕ್ರೇನ್​​ಗೆ ಶಸ್ತ್ರಾಸ್ತ್ರ ಪೂರೈಸೋ ಆದೇಶಕ್ಕೆ ಸಹಿಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಜರ್ಮನ್ ಚಾನ್ಸಲರ್​​ ಒಲಫ್ ಶೋಲ್ಟ್ಸ್​​​, ಯುಕ್ರೇನ್ ಮೇಲೆ ರಷ್ಯಾದ ದಾಳಿ ಇತಿಹಾಸದ ದೊಡ್ಡ ತಿರುವನ್ನ ತೋರಿಸುತ್ತೆ. ಇಂಥಾ ಸಮಯದಲ್ಲಿ ಯುಕ್ರೇನ್ ಬೆಂಬಲಿಸೋದು ನಮ್ಮೆಲ್ಲರ ಕರ್ತವ್ಯ ಅಂತ ಹೇಳಿದ್ದಾರೆ. ಜರ್ಮನಿಯ ಒಂದು ಪಾಲಿಸಿ ಇತ್ತು. ಅದೇನಂದ್ರೆ ಸಂಘರ್ಷ ಪೀಡಿತ ಪ್ರದೇಶಗಳಿಗೆ ಶಸ್ತ್ರಾಸ್ತ್ರ ಪೂರೈಕೆಯ ಮೇಲೆ ನಿಷೇಧವಿತ್ತು. ಆದ್ರೀಗ ಅದನ್ನು ಮೀರಿ 1000 ಆ್ಯಂಟಿ ಟ್ಯಾಂಕ್ ಶಸ್ತ್ರಾಸ್ತ್ರ, 500 ಸ್ಟ್ರಿಂಜರ್ ಅನ್ನೋ ಭೂಮಿಯಿಂದ ಆಕಾಶಕ್ಕೆ ಹಾರಿಸಬಲ್ಲ ಕ್ಷಿಪಣಿಯನ್ನು ಜರ್ಮನಿಗೆ ಕಳುಹಿಸಲು ನಿರ್ಧರಿಸಿದೆ.

ಆಸ್ಟ್ರೇಲಿಯಾ ಕೂಡ ನ್ಯಾಟೋ ಮೂಲಕ ಯುಕ್ರೇನ್​​ಗೆ ಶಸ್ತ್ರಾಸ್ತ್ರ ಪೂರೈಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್​​, ನಾವು ಈಗಾಗಲೇ ಯುಕ್ರೇನ್​​ಗೆ ಶಸ್ತ್ರಾಸ್ತ್ರ ಹೊರತಾಗಿ ವಿವಿಧ ರೀತಿಯಲ್ಲಿ ನೆರವು ನೀಡ್ತಿದ್ದೀವಿ. ಅದನ್ನು ಹೊರತುಪಡಿಸಿ ಈಗ ಶಸ್ತ್ರಾಸ್ತ್ರಗಳನ್ನು ಕೂಡ ನ್ಯಾಟೋ ಮೂಲಕ ನೀಡಲು ನಿರ್ಧರಿಸಿದ್ದೀವಿ ಅಂತ ಹೇಳಿದ್ದಾರೆ.

ಇನ್ನುಳಿದಂತೆ ಡೆನ್ಮಾರ್ಕ್​​​ ಮತ್ತು ಝೆಕ್ ರಿಪಬ್ಲಿಕ್ ಕೂಡ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿವೆ.

-masthmagaa.com

Contact Us for Advertisement

Leave a Reply