ಷೇರುಪೇಟೆ ಮಹಾಪತನ: ಒಂದೇ ದಿನ ಹೂಡಿಕೆದಾರರಿಗೆ 5 ಲಕ್ಷ ಕೋಟಿ ನಷ್ಟ

masthmagaa.com:

ಏಷ್ಯನ್‌ ಮಾರ್ಕೆಟ್‌ಗಳ ಪತನದ ಬೆನ್ನಲ್ಲೇ ಇವತ್ತು ಭಾರತದ ಮಾರ್ಕೆಟ್‌ ಕೂಡ ಷೇಕಾಗಿದೆ. ಭಾರೀ ಕುಸಿತ ಕಂಡಿದೆ. ಬ್ಯಾಂಕಿಂಗ್, ಮಿಡ್‌ಕ್ಯಾಪ್, ಸರ್ಕಾರಿ ಕಂಪನಿಗಳ ಷೇರುಗಳಲ್ಲಿ ಪ್ರಾಫಿಟ್‌ ಬುಕಿಂಗ್‌ನಿಂದ ಮಾರ್ಕೆಟ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಇವತ್ತಿನ ಸೆಷನ್‌ನಲ್ಲಿ ಸ್ಮಾಲ್ ಕ್ಯಾಪ್ ಷೇರುಗಳು ಭಾರೀ ನಷ್ಟ ಅನುಭವಿಸಿವೆ. ಮಾರುಕಟ್ಟೆಯ ಮುಕ್ತಾಯದ ನಂತರ, ಬಿಎಸ್‌ಇ ಸೆನ್ಸೆಕ್ಸ್ 1053 ಪಾಯಿಂಟ್‌ ಕುಸಿತದು 70,370ರಲ್ಲಿ ಎಂಡ್‌ ಆದ್ರೆ. ನಿಫ್ಟಿ 333 ಪಾಯಿಂಟ್‌ಗಳ ಕುಸಿತದೊಂದಿಗೆ 21,238ರಲ್ಲಿ ವಹಿವಾಟು ಮುಗಿಸಿದೆ. ಷೇರು ಮಾರುಕಟ್ಟೆ ಹೂಡಿಕೆದಾರರು ಒಂದೇ ದಿನ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕಳೆದುಕೊಂಡಿದ್ದಾರೆ. ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಷೇರುಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ. ಬ್ಯಾಂಕ್ ನಿಫ್ಟಿ ಶೇ.2.26 ಅಥವಾ 1043 ಪಾಯಿಂಟ್‌ಗಳ ಕುಸಿತ ಕಂಡಿದೆ. ಇದಲ್ಲದೇ ಆಟೋ, ಐಟಿ, ಎಫ್‌ಎಂಸಿಜಿ, ಮೆಟಲ್ಸ್, ಮೀಡಿಯಾ, ಎನರ್ಜಿ, ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ಆಯಿಲ್ ಆ್ಯಂಡ್ ಗ್ಯಾಸ್ ವಲಯದ ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಹೆಲ್ತ್‌ಕೇರ್ ಮತ್ತು ಫಾರ್ಮಾ ವಲಯದ ಷೇರುಗಳು ಮಾತ್ರ ಲಾಭದೊಂದಿಗೆ ವಹಿವಾಟು ಮುಗಿಸಿವೆ.

ಇನ್ನು ಮಂಗಳವಾರದ ವಹಿವಾಟಿನಲ್ಲಿ

ಹೆವಿವೇಟ್‌, ನಿಫ್ಟಿ

ಟಾಪ್‌ ಗೇನರ್ಸ್‌

ಸಿಪ್ಲಾ +7.05% +₹92.755 ₹1,409.00
ಸನ್‌ ಫಾರ್ಮಾ +3.93% +₹52.15 ₹1,378.30
ಭಾರ್ತಿ ಏರ್‌ಟೆಲ್‌ +3.05% +₹34.25 ₹1,158.00
ICICI +2.02% +₹20.35 ₹1,029.05
ಹೀರೊ +0.97% +₹42.55 ₹4,444.20

ಟಾಪ್‌ ಲೂಸರ್ಸ್‌

ಇಂಡಸ್‌ಇಂಡ್‌ -6.10% – ₹93.65 ₹1,441.70
ಕೋಲ್‌ ಇಂಡಿಯಾ -5.89% – ₹23.50 ₹375.30
ONGC -5.02% – ₹12.15 ₹229.90
ಅದಾನಿ ಪೋರ್ಟ್ಸ್‌ -4.69% – ₹55.90 ₹1,137.10
SBI ಲೈಫ್‌ ‌ -4.62% – ₹66.70 ₹1,375.50

-masthmagaa.com

Contact Us for Advertisement

Leave a Reply