ಮಗುವಿಗೆ ಸೀಟ್ ಸಿಗಲಿಲ್ಲ.. ಸರ್ಕಾರವನ್ನೇ ನಡುಗಿಸಿದ ತಂದೆ!

masthmagaa.coom:

ಪುಣೆಯ ಶೈಲೇಶ್ ಶಿಂಧೆ ಎಂಬುವವರ ಮಗುವಿಗೆ ಶಾಲೆಯಲ್ಲಿ ಸೀಟ್ ಸಿಗ್ತಾನೇ ಇರಲಿಲ್ಲ. ಹೀಗಾಗಿ ಶಾಲೆ ಬಗ್ಗೆ ಸಿಎಂ ಕಚೇರಿ ಮಂತ್ರಾಲಯಕ್ಕೆ ಹಲವಾರು ಬಾರಿ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ರೂ, ಪಾಸಿಟಿವ್ ರೆಸ್ಪಾನ್ಸ್​ ಬಂದೇ ಇಲ್ಲ. ಹೀಗಾಗಿ ರೊಚ್ಚಿಗೆದ್ದ ಶೈಲೇಶ್ ಶಿಂಧೆ, ಮಾಡ್ತೀನಿ ನಿಮ್ಗೆ ಅಂತ ರಾಜ್ಯದ ಗೃಹ ಇಲಾಖೆ ಇ-ಮೇಲ್ ಐಡಿಗೆ ಸಿಎಂ ಕಚೇರಿಯದಲ್ಲಿ ಬಾಂಬ್ ಇದೆ ಅಂತ ಸಂದೇಶ ರವಾನಿಸಿದ್ದಾರೆ. ಕೂಡಲೇ ಅಧಿಕಾರಿಗಳು ಬಂದು ಫುಲ್ ಹುಡುಕಾಟ ನಡೆಸಿದ್ದಾರೆ. ಆದ್ರೆ ಈ ವೇಳೆ ಏನೂ ಪತ್ತೆಯಾಗಿಲ್ಲ. ಆಗ ನಾವು ಬಕ್ರಾ ಆಗಿದ್ದೀವಿ ಅಂತ ಅರಿತುಕೊಂಡ ಪೊಲೀಸರು ಇ-ಮೇಲ್ ಮಾಡಿದವನ ಬೆನ್ನುಬಿದ್ದು, ಅರೆಸ್ಟ್​ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply