ಪಾಕ್ ಕ್ರಿಕೆಟಿಗರಿಗೆ ಗಬ್ಬರ್ ಶಿಖರ್ ಎಚ್ಚರಿಕೆ..!

ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಪಾಕ್ ಕ್ರಿಕೆಟಿಗರಿಗೆ ಗಬ್ಬರ್ ಶಿಖರ್ ಧವನ್ ತಿರುಗೇಟು ಕೊಟ್ಟಿದ್ದಾರೆ. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ಜಮ್ಮು ಕಾಶ್ಮೀರ ವಿಚಾರವಾಗಿ ಪ್ರಶ್ನೆ ಕೇಳಲಾಯ್ತು. ಈ ವೇಳೆ ಉತ್ತರಿಸಿದ ಶಿಖರ್, ಬೇರೆಯವರ ಬಗ್ಗೆ ಮಾತನಾಡುವ ಮುನ್ನ ಅವರ ಬಗ್ಗೆ ಅವರು ನೋಡಿಕೊಳ್ಳಬೇಕು. ತಮ್ಮ ಮನೆಯೇ ಸರಿಯಿಲ್ಲದಿರುವಾಗ ಬೇರೆಯವರ ಮನೆಯ ಬಗ್ಗೆ ಮಾತನಾಡಬಾರದು. ನಮ್ಮ ದೇಶದ ಬಗ್ಗೆ ಯಾರಾದರೂ ಮಾತನಾಡಿದ್ರೆ ನಾವು ನಿರ್ಧಾರ ತೆಗೆದುಕೊಳ್ಳಬೇಕು. ನಮಗೆ ಬೇರೆ ದೇಶದವರ ಸಲಹೆಗಳು ಬೇಕಾಗಿಲ್ಲ ಅಂದ್ರು. ಅಲ್ಲದೆ ಪಾಕಿಸ್ತಾನ ಮೊದಲು ತಮ್ಮ ಸಮಸ್ಯೆಗಳ ಬಗ್ಗೆ ಗಮನಹರಿಸಲಿ. ಆಮೇಲೆ ಬೇರೆ ದೇಶದ ಬಗ್ಗೆ ಮಾತನಾಡಲಿ. ಅವರ ಮನೆಯೇ ಗಾಜಿನ ಮನೆಯಾಗಿರೋವಾಗ ಒಳಗೆ ಕುಳಿತು ಬೇರೆ ಮನೆಗೆ ಕಲ್ಲು ಹೊಡೆಯೋ ಪ್ರಯತ್ನ ಮಾಡಬಾರದು ಎಂದು ಸಲಹೆ ಕೊಟ್ಟಿದ್ದಾರೆ.

Contact Us for Advertisement

Leave a Reply