ಇಮ್ರಾನ್ ಖಾನ್ ನಪುಂಸಕ: ವಿಶ್ವಸಂಸ್ಥೆ ಭಾಷಣಕ್ಕೆ ಸ್ವಾಮಿ ಕೆಂಡ

ವಿಶ್ವಸಂಸ್ಥೆಯಲ್ಲಿ ಮನಬಂದಂತೆ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ಗೆ ಸುಬ್ರಮಣಿಯನ್ ಸ್ವಾಮಿ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಇಮ್ರಾನ್ ಭಾಷಣವನ್ನು ರಸ್ತೆಬದಿಯ ಭಾಷಣಕ್ಕೆ ಹೋಲಿಸಿದ್ದಲ್ಲದೆ, ತಮ್ಮ ದೇಶದ ಸೇನಾ ಒತ್ತಡದಿಂದ ಹೀಗೆ ಹೇಳಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೀತಿ ರಸ್ತೆಯ ಮೇಲೆ ನಿಂತ ಕೆಲವು ವ್ಯಕ್ತಿಗಳನ್ನು ಉದ್ದೇಶಿಸಿ ಮಾತನಾಡಿದಂತಿತ್ತು. ಇದೊಂದು ಅತ್ಯಂತ ಕೆಟ್ಟ ಭಾಷಣವಾಗಿತ್ತು. ಅತಿಥಿ ವಿಭಾಗದಲ್ಲಿ ಕುಳಿತಿದ್ದವರು ಮಾತ್ರ ಭಾಷಣಕ್ಕೆ ಚಪ್ಪಾಳೆ ತಟ್ಟುತ್ತಿದ್ದರು. ವಿಶ್ವಸಂಸ್ಥೆಯಂತಹ ವೇದಿಕೆಯಲ್ಲಿ ತಮ್ಮ ರಾಷ್ಟ್ರದ ರಾಜಕೀಯದ ಬಗ್ಗೆ ಮಾತನಾಡಬಾರದು. ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಬೇಕು ಎಂದಿದ್ದಾರೆ. ಅಲ್ಲದೆ ಇಮ್ರಾನ್ ಮಾತಿನಿಂದ ಪಾಕಿಸ್ತಾನದ ಕೆಲ ಅನಕ್ಷರಸ್ಥ ಜನರಿಗೆ ಖುಷಿಯಾಗಿರಬಹುದು. ಪಾಕ್ ಒತ್ತಡದಿಂದ ಇಮ್ರಾನ್ ಹೀಗೆ ಮಾತನಾಡಿದ್ದು ಅವರೊಬ್ಬ ನಪುಂಸಕ ಎಂದು ವ್ಯಂಗ್ಯವಾಡಿದ್ದಾರೆ.

Contact Us for Advertisement

Leave a Reply