ಯಶಸ್ಸಿನ ಹಾದಿಯಲ್ಲಿ “ಸಕೂಚಿ”

masthmagaa.com:

ಅಶ್ವಿನ್ ಬಿ.ಸಿ ನಿರ್ಮಿಸಿರುವ, ಅಶೋಕ್ ಚಕ್ರವರ್ತಿ ನಿರ್ದೇಶನದಲ್ಲಿ ತ್ರಿವಿಕ್ರಮ್ ಹಾಗೂ ಡಯಾನ ಅವರು ನಾಯಕ – ನಾಯಕಿಯಾಗಿ ನಟಿಸಿರುವ “ಸಕೂಚಿ” ಚಿತ್ರ ಬಿಡುಗಡೆಯಾಗಿ ಯಶಸ್ವಿ ಇಪ್ಪತ್ತೈದು ದಿನಗಳ ಪ್ರದರ್ಶನ ಕಂಡಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಂಡರು.

ಕನ್ನಡದಲ್ಲಿ ಈಗ ವಾರಕ್ಕೆ ಹತ್ತಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಚಿತ್ರ ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವುದು ಖುಷಿಯಾಗಿದೆ. ಇದಕ್ಕೆ ಕಾರಣರಾದ ನಿರ್ಮಾಪಕರಿಗೆ, ನನ್ನ ತಂಡಕ್ಕೆ, ಮಾಧ್ಯಮದವರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ. ಈ ವಾರದಿಂದ ಬೆಂಗಳೂರಿನಲ್ಲಿ ನಾಲ್ಕೈದು ಚಿತ್ರಮಂದಿರಗಳು ಹೆಚ್ಚಾಗುವ ಸಾಧ್ಯತೆಯಿದೆ. ಬುಕ್ ಮೈ ಶೋನಲ್ಲಿ 8.3 ರೇಟಿಂಗ್ ಇದೆ. ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದಲ್ಲಿ ಬರುವ ಮಾರಮ್ಮ, ಬೆಂಕಿ ಮುಂತಾದ ಪಾತ್ರಗಳ ಬಗ್ಗೆ ಮೆಚ್ಚುಗೆ ಮಾತುಗಳಾಡುತ್ತಿದ್ದಾರೆ. ಓಟಿಟಿ, ಡಬ್ಬಿಂಗ್ ಹಕ್ಕು ಇವುಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಮುಂದೆ “ಸಕೂಚಿ” ಭಾಗ 2 ಮಾಡುವ ಯೋಚನೆಯಿದೆ ಎಂದು ನಿರ್ದೇಶಕ ಅಶೋಕ್ ಚಕ್ರವರ್ತಿ ತಿಳಿಸಿದರು.

ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ನಾಯಕಿ ಡಯಾನ ಸಂತಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ನಟಿಸಿರುವ ಸಂಜಯ್ ರಾಜ್, ಹರೀಶ್ ಯಾದವ್, ” ಮಾರಮ್ಮ” ಪಾತ್ರಧಾರಿ, ನೃತ್ಯ ನಿರ್ದೇಶಕ ಆನಂದ್, ಸತ್ಯ ಪಿಕ್ಚರ್ಸ್ ನ ಪ್ರಶಾಂತ್ ಹಾಗೂ ಸಂಗೀತ ನಿರ್ದೇಶಕ ಗಣೇಶ್ ಗೋವಿಂದಸ್ವಾಮಿ ಯಶಸ್ವಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

-masthmagaa.com

Contact Us for Advertisement

Leave a Reply