ತಾಲಿಬಾನಿಗಳೊಂದಿಗೆ ಅಮೆರಿಕ ಮೀಟಿಂಗ್! ‘ದೊಡ್ಡಣ್ಣ’ನಿಗೆ ಇದೆಂಥಾ ಸ್ಥಿತಿ!

masthmagaa.com:

ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆತ ಕಂಪ್ಲೀಟ್ ಆದ್ಮೇಲೆ ಇದೇ ಮೊದಲ ಬಾರಿಗೆ ಅಮೆರಿಕ ತಾಲಿಬಾನಿಗಳ ಜೊತೆ ಮೀಟಿಂಗ್ ಮಾಡ್ತಿದೆ. ಕತಾರ್ ರಾಜಧಾನಿ ದೋಹಾದಲ್ಲಿ ಅಮೆರಿಕದ ಹಿರಿಯ ಅಧಿಕಾರಿಗಳ ನಿಯೋಗ ಮತ್ತು ತಾಲಿಬಾನ್ ಹಿರಿಯ ನಾಯಕರ ಜೊತೆ ಇಂದು ಮತ್ತೆ ನಾಳೆ ಈ ಸಭೆ ನಡೀತಾ ಇದೆ. ಅಫ್ಘಾನಿಸ್ತಾನದಲ್ಲಿ ಇನ್ನೂ ವಿದೇಶಿ ಪ್ರಜೆಗಳು ಸಿಲುಕಿದ್ದಾರೆ. ಜೊತೆಗೆ ಅಪ್ಘಾನಿಸ್ತಾನದ ಕೆಲ ಪ್ರಜೆಗಳು ಕೂಡ ದೇಶವನ್ನು ತೊರೆಯಲು ಯತ್ನಿಸ್ತಿದ್ದಾರೆ. ಹೀಗಾಗಿ ಅಂಥವರು ಸುರಕ್ಷಿತವಾಗಿ ಹೊರಬರುವಂತೆ ಮಾಡೋದು ಈ ಸಭೆಯ ಉದ್ದೇಶ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಅಮೆರಿಕ ತಾಲಿಬಾನಿಗಳ ಜೊತೆಗೆ ಮೀಟಿಂಗ್ ಮಾಡ್ತಿರೋದು ನೋಡ್ತಿದ್ರೆ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ಕೊಡ್ತಾರೇನೋ ಅನ್ನೋ ವಾದಗಳು ಕೇಳಿ ಬಂದಿದ್ವು. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕದ ಸ್ಟೇಟ್ ಡಿಪಾರ್ಟ್​ಮೆಂಟ್ ವಕ್ತಾರ ನೆಡ್​ಪ್ರೈಸ್​​, ನಾವು ಮೀಟಿಂಗ್ ಮಾಡ್ತಿದ್ದೀವಿ ಅಂದ್ಕೂಡ್ಲೆ ಮಾನ್ಯತೆ ನೀಡ್ತೀವಿ ಅಂತ ಅರ್ಥವಲ್ಲ. ಮಾನ್ಯತೆ ನೀಡೋದು ಅವರ ಕಾರ್ಯವೈಖರಿಯ ಮೇಲೆ ನಿಂತಿದೆ ಅಂತ ಹೇಳಿದ್ದಾರೆ. ಜೊತೆಗೆ ಈ ಎರಡು ದಿನಗಳ ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಮಾನವ ಹಕ್ಕುಗಳನ್ನು ಪಾಲಿಸುವಂತೆ ತಾಲಿಬಾನಿಗಳ ಮೇಲೆ ಒತ್ತಡ ಹೇರ್ತೀವಿ ಅಂತ ಕೂಡ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅಮೆರಿಕ 2020ರ ಜನವರಿಯಲ್ಲಿ ತಾಲಿಬಾನಿಗಳಿಂದ ಕಿಡ್ನಾಪ್ ಆಗಿದ್ದ ಅಮೆರಿಕದ ಪ್ರಜೆ ಮಾರ್ಕ್ ಫ್ರೆರಿಚ್ಸ್​​​ರನ್ನು ಕೂಡ ಬಿಡುಗಡೆ ಮಾಡುವಂತೆ ಒತ್ತಡ ಹೇರೋ ಸಾಧ್ಯತೆ ಇದೆ.

ಈ ನಡುವೆ ನಿನ್ನೆ ಅಫ್ಘಾನಿಸ್ತಾನದ ಕುಂದುಝ್ ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ದಾಳಿಯ ಹೊಣೆ ಐಎಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಈ ದಾಳಿಯಲ್ಲಿ 46 ಮಂದಿ ಪ್ರಾಣ ಕಳ್ಕೊಂಡು, ನೂರಾರು ಮಂದಿ ಗಾಯಗೊಂಡಿದ್ರು. ಕೆಲ ಮಾಧ್ಯಮಗಳು ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಅಂತಲೂ ವರದಿ ಮಾಡಿವೆ. ಅಮೆರಿಕ ಕೂಡ ಈ ದಾಳಿಯನ್ನು ಖಂಡಿಸಿದೆ.

-masthmagaa.com

Contact Us for Advertisement

Leave a Reply